ಮಲ್ಲೇಶ್ವರ ಸ್ಟ್ರಾಂಗ್ ರೂಂ ನಲ್ಲಿ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ.ಸ್ಟ್ರಾಂಗ್ ರೂಂ ನಿಂದ ವೋಟಿಂಗ್ ಸೆಂಟರ್ ಗೆ ಇವಿಎಂ ಗಳು ತೆರಳಲಿದ್ದು,ಎಲ್ಲ ಅಧಿಕಾರಿಗಳಿಗೆ ಆರ್ ಓ ರಮೇಶ್ ದೇಸಾಯಿ ಸೂಚನೆ ನೀಡಿದ್ದಾರೆ.ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಇವಿಎಂ ಗಳು ತೆರಳಲಿದೆ.ಅಂತಿಮ ಹಂತದ ಸಿದ್ಧತೆ ಚುನಾವಣಾ ಹಾಗೂ ಪೊಲೀಸ್ ಅಧಿಕಾರಿಗಳು ಮಾಡಿಕೊಂಡಿದ್ದಾರೆ.
ಅಲ್ಲದೇ ಮಲ್ಲೇಶ್ವರ ಸ್ಟ್ರಾಂಗ್ ರೂಂ ನಲ್ಲಿ 213 ಮತಗಟ್ಟೆಗಳಿವೆ. 54 ವಾಹನಗಳ ವ್ಯವಸ್ಥೆ,1100 ಮತಗಟ್ಟೆ ಸಿಬ್ಬಂದಿ 400 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಮಲ್ಲೇಶ್ವರ ಸ್ಟ್ರಾಂಗ್ ರೂಂ ಪಕ್ಷದ ಏಜೆಂಟ್, ಪೊಲೀಸರ ಸಮ್ಮದಲ್ಲಿ ಸ್ಟ್ರಾಂಗ್ ರೂಂ ಓಪನ್ ಮಾಡಿದ್ದು,ಆರ್.ಓ ರಮೇಶ್ ದೇಸಾಯಿ ಅವರಿಂದ ಸ್ಟ್ರಾಂಗ್ ರೂಂ ಓಪನ್ ಆಗಿದೆ.ಇಲ್ಲಿಂದ ಇವಿಎಂ ಮಷಿನ್ ಗಳು 18 ಸೆಕ್ಟರ್ ರೂಂ ಗಳಿಗೆ ರವಾನೆಯಾಗಲಿದೆ.ಮಧ್ಯಾಹ್ನದ ನಂತರ 213 ಮತಗಟ್ಟೆಗಳಿಗೆ ಇವಿಎಂ ಗಳು ರವಾನೆಯಾಗಲಿದ್ದು,54 ವಾಹನಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ರವಾನೆ ಮಾಡಲಾಗುತ್ತೆ.