ಜೈಲಿನಲ್ಲಿಯೇ ಭಾರೀ ಹೊಡೆದಾಟ

Webdunia
ಗುರುವಾರ, 26 ಡಿಸೆಂಬರ್ 2019 (16:20 IST)
ಜೈಲಿನಲ್ಲಿಯೇ ಭಾರೀ ಹೊಡೆದಾಟ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ವಿಚಾರಣಾಧೀನ ಖೈದಿಗಳಿಬ್ಬರು ಜಗಳ ಮಾಡಿಕೊಂಡು ಕಲ್ಲಿನಿಂದ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ಹುಬ್ಬಳ್ಳಿಯ ವಿಶ್ವೇಶ್ವರ ನಗರದ ಉಪ ಕಾರಾಗೃಹದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾನೆ. ರಾಯನಾಳ ಗ್ರಾಮದ ಸಿದ್ದಪ್ಪ ಗದಿಗೆಪ್ಪ ಕೋಳೂರ (36) ಹಲ್ಲೆಗೀಡಾದವನಾಗಿದ್ದು, ತಾಲೂಕಿನ ಬಮ್ಮಸಮುದ್ರ ಗ್ರಾಮದ ಖಾದರಸಾಬ ಮಹಮ್ಮದ್ ಸಾಬ ಮುನಿಯಾರ್ (40) ಹಲ್ಲೆ ನಡೆಸಿದ ವಿಚಾರಣಾಧೀನ ಖೈದಿಯಾಗಿದ್ದಾನೆ.

ಸ್ನೇಹಿತರಾಗಿದ್ದ ಸಿದ್ದಪ್ಪ ಹಾಗೂ ಖಾದರ್ ಇಬ್ಬರೂ ಮಾತನಾಡುತ್ತ ಕುಳಿತಿದ್ದರು. ನಂತರ 6 ಗಂಟೆಗೆ ಒಳಗೆ ಹೊರಡುವ ವೇಳೆ ಇಬ್ಬರ ನಡುವೆ ಜಗಳ ಸಂಭವಿಸಿ, ನಿನಗ್ಯಾರೂ ಭೇಟಿ ಮಾಡಲು ಬರುವುದಿಲ್ಲ. ನಿನಗೆ ಜೈಲೇ ಗತಿ ಎಂದು ಸಿದ್ದಪ್ಪ ಹೇಳಿದ್ದ, ಈ ಮಾತಿನಿಂದ ಸಿಟ್ಟಾದ ಖಾದರ್, ಪಕ್ಕದಲ್ಲೇ ಇದ್ದ ಕಲ್ಲು ತೆಗೆದುಕೊಂಡು ಸಿದ್ದಪ್ಪನ‌ ತಲೆಗೆ ಹೊಡೆದಿದ್ದಾನೆ. ನಂತರ ಗಾಯಾಳುವನ್ನು ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. 

ಇನ್ನೂ ಅಶೋಕನಗರ ಠಾಣೆ ಪೋಲಿಸರು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿದ್ದಪ್ಪ ಹಾಗೂ ಖಾದರ್ ಇಬ್ಬರೂ ಕೊಲೆ ಆರೋಪಿಗಳಾಗಿದ್ದು, ಸಿದ್ದಪ್ಪ 2015  ರಲ್ಲಿ, ಖಾದರ್ 2017 ರಲ್ಲಿ ಸಬ್ ಜೈಲಿಗೆ ದಾಖಲಾಗಿದ್ದಾರೆ.
,

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೋಪಿನಾಥ್ ಮುಂಡೆ, ಪ್ರಮೋದ್ ಮಹಾಜನ್, ಈಗ ಅಜಿತ್ ಪವಾರ: ಮಹಾರಾಷ್ಟ್ರಕ್ಕೆ ಇದ್ಯಾರ ಶಾಪ

ಹಿಮದಲ್ಲಿ ಹೂತು ಹೋಗಿದ್ದ ಮಾಲಿಕನ ಮೃತದೇಹಕ್ಕೆ ಮೂರು ದಿನ ಕಾವಲು ನಿಂತ ನಾಯಿ Video

ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿಯಿಂದ ಪಿಯುಸಿವರೆಗೆ ಪಠ್ಯಪುಸ್ತಕ, ನೋಟ್ ಬುಕ್ ಉಚಿತ: ಮಧು ಬಂಗಾರಪ್ಪ

ಸುಟ್ಟು ಕರಕಲಾಗಿದ್ದ ದೇಹಗಳ ನಡುವೆ ಅಜಿತ್ ಪವಾರ್ ದೇಹ ಪತ್ತೆ ಮಾಡಿದ್ದು ಹೇಗೆ

ಅಜಿತ್ ಪವಾರ್ ನಿಧನ, ಇಂದು ರಜೆ, ಮೂರು ದಿನ ರಾಜ್ಯದಲ್ಲಿ ಶೋಕಾಚರಣೆ

ಮುಂದಿನ ಸುದ್ದಿ
Show comments