Publish Date: Sat, 23 Sep 2017 (10:48 IST)
Updated Date: Sat, 23 Sep 2017 (10:51 IST)
ಬೆಂಗಳೂರು: ಬನ್ನೇರಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ನಡೆದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ಬೆಳಗ್ಗೆ 7.30ಕ್ಕೆ ಶುರುವಾದ ಆಪರೇಷನ್, 8.15ರ ಸುಮಾರಿಗೆ ಆಪರೇಷನ್ ಮುಗಿದಿತ್ತು. ಹತ್ತು ವರ್ಷಗಳ ಹಿಂದೆ ಅಳವಡಿಸಿದ್ದ ಟಿಶ್ಯುವಾಲ್ವ್ ರಿಪ್ಲೇಸ್ ಮಾಡಲಾಗಿದೆ. ಚಿಕಿತ್ಸೆ ಬಳಿಕ ರಿಕವರಿಗಾಗಿ ಕನಿಷ್ಠ ಮೂರು ಗಂಟೆ ಬೇಕು. ಹೀಗಾಗಿ 12 ಗಂಟೆ ವೇಳೆಗೆ ಕುಮಾರಸ್ವಾಮಿ ಆರೋಗ್ಯ ಸಹಜ ಸ್ಥಿತಿಗೆ ಬರುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಡಾ. ಸತ್ಯಕಿ ನೇತೃತ್ವದಲ್ಲಿ ಈ ಆಪರೇಷನ್ ನಡೆದಿದೆ. ಹೆಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಮತ್ತು ಹೆಚ್.ಡಿ.ಕೆ ಸೋದರಿ ಶೈಲಜಾ, ಜೆಡಿಎಸ್ ಮುಖಂಡ ಸಾ.ರಾ.ಮಹೇಶ್, ಮೈಸೂರು ಮೇಯರ್ ರವಿಕುಮಾರ್ ಆಪರೇಷನ್ ಥಿಯೇಟರ್ ಹೊರಗೆ ನಿಂತಿದ್ದಾರೆ.