Publish Date: Wed, 07 Aug 2019 (16:56 IST)
Updated Date: Wed, 07 Aug 2019 (16:58 IST)
ಹೆಡ್ ಮಾಸ್ಟರ್ ರೊಬ್ಬು ಶಾಲೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ರೆಸಿಡೆನ್ಸಿ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ.
ಹೆಡ್ ಮಾಸ್ಟರ್ ಆತ್ಮಹತ್ಯೆಗೆ ಕಾರಣ ಕಾರಣ ತಿಳಿದು ಬಂದಿಲ್ಲ.
ಗಂಗಣ್ಣ (53) ನೇಣು ಬಿಗಿದ ರೀತಿಯಲ್ಲಿ ಸಾವನ್ನಪ್ಪಿರುವ ಹೆಡ್ ಮಾಸ್ಟರ್ ಆಗಿದ್ದಾರೆ.
ಗೌರಿಬಿದನೂರು ಪೊಲೀಸ್ ಠಾಣೆ ಪಕ್ಕದಲ್ಲೇ ಇರುವ ರೆಸಿಡೆನ್ಸಿ ಶಾಲೆಯಲ್ಲಿ ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.