Publish Date: Wed, 11 Dec 2019 (15:58 IST)
Updated Date: Wed, 11 Dec 2019 (16:00 IST)
ರಾಜ್ಯದ ಉಪಚುನಾವಣೆಯಲ್ಲಿ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಹೀಗಂತ ಮಾಜಿ ಸಿಎ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಕಾರ್ಯಕರ್ತರಿಗೆ ಹೇಳಿದ್ರಾ? ಇಂಥದ್ದೊಂದು ಅನುಮಾನ ಇದೀಗ ಶುರುವಾಗಿದೆ.
ಪೂರ್ಣ ಅವಧಿವರೆಗೆ ಬಿಜೆಪಿ ಸರಕಾರಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳುವೆ. ಹೀಗಂತ ಹೆಚ್.ಡಿ.ಕುಮಾರಸ್ವಾಮಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಕುಮಾರಸ್ವಾಮಿ ಆಸೆಯಂತೆ ಬಿಜೆಪಿಯನ್ನು ಬೆಂಬಲಿಸಿ ಜನರು ಗೆಲ್ಲಿಸಿದ್ದಾರೆ. ಹೀಗಂತ ಮಾಜಿ ಸಚಿವ ಜಿ.ಟಿ.ದೇವೇಗೌಡರು ಟಾಂಗ್ ನೀಡಿದ್ದಾರೆ.
ಉಪ ಚುನಾವಣೆಯಲ್ಲಿ ಜೆಡಿಎಸ್ ಅತ್ಯಂತ ಹೀನಾಯ ಸೋಲು ಕಂಡಿರೋ ಹಿನ್ನೆಲೆಯಲ್ಲಿ ಜಿಟಿಡಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹೆಚ್. ವಿಶ್ವನಾಥ್ ಒಕ್ಕಲಿಗರನ್ನು ಟೀಕೆ ಮಾಡಿದ್ದರಿಂದಲೇ ಸೋತು ಸುಣ್ಣವಾದರು ಅಂತ ತಿರುಗೇಟು ನೀಡಿದ್ರು.