Publish Date: Tue, 10 Dec 2019 (11:17 IST)
Updated Date: Tue, 10 Dec 2019 (11:18 IST)
ಬೆಂಗಳೂರು : ಹೊರಗಿನಿಂದ ಬಂದು ಗೆದ್ದವರಿಗೆ ಮಂತ್ರಿಗಿರಿ ಪಕ್ಕಾ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ರಾಜೀನಾಮೆಯಿಂದಲೇ ಬಿಜೆಪಿ ಸರ್ಕಾರ ಬಂದಿದೆ. ಆದ್ದರಿಂದ ಹೊರಗಿನಿಂದ ಬಂದು ಗೆದ್ದ ಎಲ್ಲಾ ಬಿಜೆಪಿ ಶಾಸಕರಿಗೂ ಮಂತ್ರಿಗಿರಿ ಪಕ್ಕಾ ಎಂದು ಹೇಳಿದ್ದಾರೆ.
ಒಂದೆರಡು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡ್ತೇವೆ. ಗೆದ್ದ ಎಲ್ಲಾ ಶಾಸಕರಿಗೂ ಕೊಟ್ಟ ಭರವಸೆ ಈಡೇರಿಸುತ್ತೇನೆ. ಸೋತ ಅನರ್ಹ ಶಾಸಕರಿಗೆ ಸ್ಥಾನಮಾನದ ಬಗ್ಗೆ ಮಾತನಾಡಲ್ಲ ಎಂದು ಅವರು ತಿಳಿಸಿದ್ದಾರೆ.