Select Your Language

Notifications

webdunia
webdunia
webdunia
webdunia

ವೈನ್ ಬಾಟಲಿ ಖರೀದಿಸಿದ ಗ್ರಾಹಕನಿಗೆ 1.79 ಲಕ್ಷ ರೂ. ವಂಚನೆ!

wine bengaluru cyber crime

ಆನ್‍ಲೈನ್ ಮೂಲಕ ವೈನ್ ಬಾಟಲಿ ಖರೀದಿಸಿದ್ದ ಗ್ರಾಹನೊಬ್ಬನಿಗೆ ಸೈಬರ್ ಖದೀಮರು ಬರೊಬ್ಬರಿ 1.79 ಲಕ್ಷ ರೂ. ವಂಚಿಸಿರುವ ಘಟನೆ ನ

ಗರದಲ್ಲಿ ನಡೆದಿದೆ.

ಅಲಿ ಅಸ್ಗರ್ ರಸ್ತೆಯ ದಿ ಎಂಬೆಸ್ಸಿ ಅಪಾರ್ಟ್‍ಮೆಂಟ್‍ನಲ್ಲಿ ನೆಲೆಸಿರುವ 80 ವರ್ಷದ ನಿವೃತ್ತ ಅಧಿಕಾರಿ ವಂಚನೆಗೆ ಒಳಗಾದವರು. ಆ.19ರಂದು ವಿಭೂತಿಪುರದ ಕ್ರಿಸ್ಟಲ್ ವೈನ್ಸ್ ಪೆÇೀರ್ಟಲ್‍ನಲ್ಲಿ 1 ವೈನ್ ಬಾಟಲ್ ಆರ್ಡರ್ ಮಾಡಿದ್ದಾರೆ. ವಾಪಸ್ ಕರೆ ಮಾಡಿದ ಅಪರಿಚಿತ ನೀಲೇಶ್ ಚೌಧರಿ, ವೈನ್ ಶಾಪ್ ನೌಕರ ಎಂದು ಪರಿಚಯಿಸಿಕೊಂಡಿದ್ದಾನೆ.

ನಿವೃತ್ತ ಅಧಿಕಾರಿ ವೈನ್ ಬಾಟಲ್ ಜತೆಗೆ 1 ಪ್ಯಾಕೇಟ್ ಸಿಗರೇಟ್ ಸಹ ಆರ್ಡರ್ ಮಾಡಿದ್ದರು. ಒಟ್ಟಾರೆ ಬಿಲ್ 730 ರೂ. ಬಿಲ್ ಆಗಿತ್ತು. ಅದಕ್ಕೆ ನಿವೃತ್ತ ಅಧಿಕಾರಿ, ಪೇಟಿಎಂನಲ್ಲಿ ಬಿಲ್ ಪಾವತಿಗೆ ಮುಂದಾದಾಗ ನೀಲೇಶ್, ಪೇಟಿಎಮ್ ಸೇವೆ ಇಲ್ಲ. ಕ್ರೆಡಿಟ್ ಕಾರ್ಡ್‍ನಲ್ಲಿ ಪಾವತಿಗೆ ಸೂಚಿಸಿದ್ದಾನೆ. ಅದಕ್ಕೆ ಒಪ್ಪಿದ ಗ್ರಾಹಕ, ತನ್ನ ಕ್ರೆಡಿಟ್ ಕಾರ್ಡ್ ನಂಬರ್ ಕೇಳಿದಾಗ 99,860 ರೂ. ಮತ್ತು 31,000ರೂ. ವರ್ಗಾವಣೆ ಮಾಡಿಕೊಂಡಿದ್ದಾನೆ.

ಗಾಬರಿಕೊಂಡ ಗ್ರಾಹಕ, ನೀಲೇಶ್‍ಗೆ ಕರೆ ಮಾಡಿ ಪ್ರಶ್ನಿಸಿದ್ದರು. ಅದಕ್ಕೆ ವಂಚಕ, `ನಾನು ಮದ್ಯ ಸೇವನೆ ಮಾಡಿದ್ದು, ಗೊತ್ತಾಗದೆ ತಪ್ಪು ನಂಬರ್ ಒತ್ತಿದ್ದೇನೆ. ನಿಮ್ಮ ಬೇರೆ ಕ್ರೆಡಿಟ್ ಕಾರ್ಡ್ ನಂಬರ್ ಹೇಳಿ. ವಾಪಸ್ ಹಣ ಕಳುಹಿಸುತ್ತೇನೆ' ಎಂದು ಪುಸಲಾಯಿಸಿದ್ದಾನೆ. ಆಗ ನಿವೃತ್ತ ಅಧಿಕಾರಿ, ಮತ್ತೊಂದು ಕಾರ್ಡ್ ನಂಬರ್ ಕೊಟ್ಟಾಗ ಅದರಲ್ಲಿಯೂ 19,190 ರೂ. ಮತ್ತು 29,280 ರೂ. ಹಂತ- ಹಂತವಾಗಿ ವರ್ಗಾವಣೆ ಮಾಡಿಕೊಂಡು ಸಂಪರ್ಕ ಕಡಿತ ಮಾಡಿದ್ದಾನೆ. ಕೊನೆಗೆ ವಂಚನೆಗೊಳಗಾಗಿರುವುದು ನಿವೃತ್ತ ಅಧಿಕಾರಿ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ವಿಭಾಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಾದಕ ವಸ್ತು ಗಾಂಜಾ, ಅಂಬರ್‍ಗ್ರೀಸ್ ಮಾರಾಟ