Publish Date: Sun, 22 Aug 2021 (18:43 IST)
Updated Date: Sun, 22 Aug 2021 (18:45 IST)
ಮೈಸೂರು ರಸ್ತೆ ನಡುವಿನ ಕೆಂಗೇರಿ ಮಾರ್ಗ ಮೆಟ್ರೋ ಸಂಚಾರ ಆಗಸ್ಟ್ 29ರಿಂದ ಆರಂಭಗೊಳ್ಳಲಿದೆ. ಈ ಮೂಲಕ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಮತ್ತೊಂ
ದು ಮೈಲಿಗಲ್ಲು ಸಾಧಿಸಿದೆ.
ಆಗಸ್ಟ್ 29ರಂದು 7.53 ಕಿ.ಮೀ ಉದ್ದದ ಮೆಟ್ರೋ ಮಾರ್ಗ ವಾಣಿಜ್ಯ ಸಂಚಾರಕ್ಕೆ ನೂತನ ಮಾರ್ಗಕ್ಕೆ ಚಾಲನೆ ದೊರೆಯಲಿದ್ದು, ಅದೇ ದಿನ ಮಧ್ಯಾಹ್ನದಿಂದ ಪ್ರಯಾಣಿಕರಿಗೆ ಸಂಚಾರ ಮುಕ್ತವಾಗಲಿದೆ.
ನೇರಳೆ ಮಾರ್ಗದ ವಿಸ್ತರಿತ ಮಾರ್ಗದಲ್ಲಿ ಮೆಟ್ರೋ ಸಂಚರಿಸಲಿದ್ದು, ವಿಸ್ತರಿಸಿದ ಮಾರ್ಗದಲ್ಲಿ ನಾಯಂಡಹಳ್ಳಿ, ಆರ್ ಆರ್ ನಗರ,ಜ್ಞಾನಭಾರತಿ, ಪಟ್ಟಣಗೆರೆ ಮೈಲಸಂದ್ರ,ಕೇಂಗೇರಿ ಬಸ್ ನಿಲ್ದಾಣದಲ್ಲಿ ಓಡಲಿದೆ.
ಮೈಸೂರು ರಸ್ತೆ- ಕೆಂಗೇರಿ ನಡುವಿನ ಮಾರ್ಗ ವಿಸ್ತರಿಸಿದ ಮಾರ್ಗದ ಸಂಚಾರಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಹಸಿರುನಿಶಾನೆ ತೋರಲಿದ್ದಾರೆ.
ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆವರೆಗೆ ಮಾತ್ರ ಮೆಟ್ರೋ ಇತ್ತು. ಇದೀಗ ಬೈಯಪ್ಪನಹಳ್ಳಿ ಟು ಕೆಂಗೇರಿ ವರೆಗೆ ಮೆಟ್ರೋ ಸಂಚರಿಸಲಿದೆ.