Publish Date: Fri, 05 Jul 2019 (17:19 IST)
Updated Date: Fri, 05 Jul 2019 (17:21 IST)
ಮನೆ ಬಿಟ್ಟು ಹೋಗು ಎಂದು ಹೇಳಿದರೂ ಹೋಗದವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಉಳ್ಳಾಲ ಹತ್ತಿರದ ಚೆಂಬುಗುಡ್ಡೆ ದೇವಸ್ಥಾನದ ಮುಂಭಾಗದಲ್ಲಿ ನಾರಾಯಣ ಎಂಬಾತನ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಕೊಲೆಯಾದವನ ಸಂಬಂಧಿಯೇ ಕೊಲೆ ಮಾಡಿದ್ದಾಗಿ ತನಿಖೆಯಿಂದ ಕಂಡುಕೊಂಡಿದ್ದಾರೆ.
ರಾಜೇಶ್ ಎಂಬಾತ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ರಾಜೇಶ್ ನ ತಾಯಿಯ ಅಣ್ಣನ ಮಗನಾಗಿರುವ ನಾರಾಯಣನು ಮನೆ ಬಿಟ್ಟು ಹೋಗುವ ಕುರಿತು ಹಲವು ಬಾರಿ ಜಗಳ ಆಗಿತ್ತು. ಆದರೆ ನಾರಾಯಣ ಮನೆ ಬಿಟ್ಟು ಹೋಗಿರಲಿಲ್ಲ. ರಾಜೇಶನ ತಾಯಿ ಲಲಿತಾ ಕಳೆದ 25 ವರ್ಷಗಳಿಂದ ಅವರ ಅಣ್ಣನ ಮಗ ನಾರಾಯಣನ ಜತೆ ಚೆಂಬುಗುಡ್ಡೆಯಲ್ಲಿ ಒಂದೇ ಮನೆಯಲ್ಲಿ ವಾಸವಿದ್ದರು.
ರಾಜೇಶ್ ತಾನು ಮದುವೆಯಾಗಬೇಕಿರುವ ಹಿನ್ನೆಲೆಯಲ್ಲಿ ಮನೆಬಿಟ್ಟು ಹೊರಡುವಂತೆ ನಾರಾಯಣಗೆ ತಿಳಿಸಿದ್ದಾರೆ.
ಆದರೆ ನಾರಾಯಣ ಹಾಗೂ ರಾಜೇಶ್ ನಡುವೆ ಜಗಳ ನಡೆದಿದೆ. ವಾಗ್ವಾದ ತಾರಕಕ್ಕೇರಿ ಕತ್ತಿಯಿಂದ ರಾಜೇಶ್ ನಾರಾಯಣನನ್ನು ಕೊಲೆಮಾಡಿದ್ದಾನೆ ಎನ್ನಲಾಗಿದೆ. ಆರೋಪಿ ರಾಜೇಶನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Jagadeesh
Publish Date: Fri, 05 Jul 2019 (17:19 IST)
Updated Date: Fri, 05 Jul 2019 (17:21 IST)