Select Your Language

Notifications

webdunia
webdunia
webdunia
webdunia

ಈ ಸಮಸ್ಯೆಗೆ ಬೆಸ್ಟ್ ಮನೆಮದ್ದು ಮಾವಿನ ಎಲೆ

ಈ ಸಮಸ್ಯೆಗೆ ಬೆಸ್ಟ್ ಮನೆಮದ್ದು ಮಾವಿನ ಎಲೆ
ಬೆಂಗಳೂರು , ಗುರುವಾರ, 4 ಜುಲೈ 2019 (09:24 IST)
ಬೆಂಗಳೂರು : ಮಾವಿನ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಾತ್ರವಲ್ಲ  ಶುಭ ಸಮಾರಂಭದ ವೇಳೆ ತೋರಣ ಕಟ್ಟಲು ಬಳಸುವ ಅದರ ಎಲೆಯಲ್ಲಿಯೂ ಕೂಡ ಆರೋಗ್ಯದ ಸಮಸ್ಯೆಗೆ  ಪರಿಹಾರ ಅಡಗಿದೆಯಂತೆ. ಹೌದು. ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಬಳಲುತ್ತಿರುವ ಮಧುಮೇಹ ಸಮಸ್ಯೆಗೆ ಇದು ರಾಮಾಬಾಣವಂತೆ.




10 ರಿಂದ 15 ಮಾವಿನ ಎಲೆಗಳನ್ನು ತೆಗೆದುಕೊಂಡು ಸ್ವಚ್ಚ ಮಾಡಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿರಿ ರಾತ್ರಿಯಿಡಿ ಅದೇ ನೀರಿನಲ್ಲಿ ಎಲೆಗಳನ್ನು ಬಿಡಿ. ಬೆಳಗ್ಗೆ ಎದ್ದತಕ್ಷಣ ಖಾಲಿ ಹೊಟ್ಟೆಯಲ್ಲಿ ಎಲೆಗಳನ್ನು ತೆಗೆದು ನೀರಿನ್ನು ಕುಡಿಯಿರಿ. ನೀವು ಎರಡು ಅಥವಾ ಮೂರು ತಿಂಗಳ ಕಾಲ ಈ ವಿಧಾನವನ್ನು ಬಳಸಿದರೆ ಮಧು ಮೇಹ ನಿಯತ್ರಣದಲ್ಲಿರುತ್ತದೆ.


ಮಾವಿನ ಎಲೆಗಳನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಿ. ನಂತ್ರ ಅದನ್ನು ಪುಡಿ ಮಾಡಿ. ಪ್ರತಿದಿನ ಒಂದು ಚಮಚ ಈ ಪುಡಿಯನ್ನು ಸೇವನೆ ಮಾಡುವುದರಿಂದ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ.



ಮಾವುಗಳ ಎಲೆಗಳ ಚಹಾ ಕುಡಿದರೆ ಜ್ವರ, ಭೇದಿ, ನಿದ್ರಾಹೀನತೆ, ಉಬ್ಬಿರುವ ರಕ್ತನಾಳಗಳು, ಅಸ್ತಮಾ, ಗಂಟಲೂತ ಮತ್ತು ಶೀತಗಳಂತಹ ಹಲವಾರು ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಈ ಎಲೆಗಳು ನಿಮ್ಮ ರಕ್ತದ ಒತ್ತಡ ಕಡಿಮೆ ಮತ್ತು ನಿಮ್ಮ ರಕ್ತನಾಳಗಳನ್ನು ಬಲಪಡಿಸುವಲ್ಲಿ ಸಹಾಯಮಾಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನ ಸುತ್ತ ಶೇಖರಣೆಯಾಗಿರುವ ಕೊಬ್ಬಿನಾಂಶ ಕರಗಿಸಲು ಹೀಗೆ ಮಾಡಿ