Publish Date: Sat, 05 Aug 2023 (18:00 IST)
Updated Date: Sat, 05 Aug 2023 (18:03 IST)
ಕಾಂಗ್ರೆಸ್, ಜೆಡಿಎಸ್ ಮಧ್ಯೆ ಟಾಕ್ವಾರ್ ಜೋರಾಗಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ಮಧ್ಯಾಹ್ನ 12 ಗಂಟೆಗೆ ಜೆ.ಪಿ.ಭವನ, ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಆಯೋಜಿಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ನಡೆ ಭಾರೀ ಕುತೂಹಲ ಮೂಡಿಸಿದ್ದು, ಕುಮಾರಸ್ವಾಮಿ ಕಾಂಗ್ರೆಸ್ ಸವಾಲು ಸ್ವೀಕರಿಸುತ್ತಾರಾ, ಎಂಬುದನ್ನು ಕಾದುನೋಡಬೇಕಿದೆ. ಪೆನ್ಡ್ರೈವ್ನಲ್ಲಿನ ದಾಖಲೆ ಬಿಡುಗಡೆಗೆ ಮಾಡುವಂತೆ ಕಾಂಗ್ರೆಸ್ ಪಟ್ಟು ಹಿಡಿದಿದೆ. ಪೆನ್ಡ್ರೈವ್ ದಾಖಲೆ ಬಹಿರಂಗಗೊಳಿಸ್ತಾರಾ ಎಂಬ ಆತಂಕ ಸಚಿವರಲ್ಲಿ ಶುರುವಾಗಿದೆ.