Select Your Language

Notifications

webdunia
webdunia
webdunia
webdunia

JDS ಏಕಾಂಗಿಯಾಗಿ ಚುನಾವಣೆಗೆ ಹೋಗುತ್ತೆ

JDS ಏಕಾಂಗಿಯಾಗಿ ಚುನಾವಣೆಗೆ ಹೋಗುತ್ತೆ
bangalore , ಬುಧವಾರ, 2 ಆಗಸ್ಟ್ 2023 (16:06 IST)
ಇಂದು ದೆಹಲಿಯಲ್ಲಿ ಹೈಕಮಾಂಡ್ ಜೊತೆ ಕಾಂಗ್ರೆಸ್ ನಾಯಕರು ಸಭೆ ನಡೆಸುತ್ತಿರುವುದರ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ಯಾವ ಹೆಸರಿನಲ್ಲಿ ಹೋಗ್ತಾರೋ ಅದರ ಬಗ್ಗೆ ನಮಗೆ ಚಿಂತೆ ಇಲ್ಲ. ನಾವು ಒಂದು ಸಿದ್ಧಾಂತದಿಂದ ಹೋಗುವವರು, ಅನ್ಯರ ಡೊಂಕನ್ನ ನಾವ್ಯಾಕೆ ತಿದ್ದೋಣ. ಯಾದಗಿರಿ, ಗುಲ್ಬರ್ಗಾ ಸೇರಿ ಐದು ಜಿಲ್ಲೆಗಳಲ್ಲಿ ಮೀಟಿಂಗ್ ಮಾಡಿದ್ದೇವೆ. ಕುಮಾರಸ್ವಾಮಿ ಅವರು ವಾಪಸ್ ಬಂದ ಮೇಲೆ ದೇವೇಗೌಡರ ಅನುಮತಿ ತೆಗೆದುಕೊಂಡು ಕಾರ್ಯಾಧ್ಯಕ್ಷರನ್ನ ಮಾಡುತ್ತೇವೆ. ಕೆಲವು ಪಂಚಾಯ್ತಿ ಚುನಾವಣೆಗಳಲ್ಲಿ ಒಳ್ಳೆ ರಿಸಲ್ಟ್ ಬಂದಿದೆ. ಜನರು ಒಂದೊಳ್ಳೆ ಭಾವನೆ ಇಟ್ಟುಕೊಂಡು ಮತ ಹಾಕಿದ್ದಾರೆ. ಜೆಡಿಎಸ್ ಏಕಾಂಗಿಯಾಗಿ, ಸ್ವತಂತ್ರವಾಗಿ ಚುನಾವಣೆಗೆ ಹೋಗುತ್ತೆ, ರಾಜ್ಯಾದ್ಯಂತ ಪ್ರವಾಸ ಮಾಡ್ತಾ ಇದ್ದೀವಿ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ನಂದಿನಿ ಪಾರ್ಲರ್ ಗೆ ಬಂತು ಹೊಸ ದರದ ಹಾಲು, ಮೊಸರು, ಮಜ್ಜಿಗೆ ಪ್ಯಾಕೇಟ್