Publish Date: Sat, 12 Nov 2022 (18:08 IST)
Updated Date: Sat, 12 Nov 2022 (18:11 IST)
ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ದೇವೇಗೌಡರನ್ನ ಕಡೆಗಣಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ H.D.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರ ತಾಲ್ಲೂಕಿನ ಬಿಡದಿಯಲ್ಲಿ ಮಾತನಾಡಿದ ಅವರು, H.D.ದೇವೇಗೌಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇದ್ದಿದ್ದಕ್ಕೆ JDSನಿಂದ ಟ್ವಿಟ್ ಮಾಡಿದ್ದಾರೆ. ಅದನ್ನು ನಾನು ಗಮನಿಸಿದ್ದೇನೆ. ಕಾರ್ಯಕ್ರಮಕ್ಕೆ ದೇವೇಗೌಡರನ್ನ ಕರೆದರೋ ಇಲ್ಲವೋ ಎಂಬುದನ್ನು ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ. ದೇವೇಗೌಡರನ್ನ ಕರೆದಿದ್ವಿ ಎಂದು BJPಯವರು ಟ್ವೀಟ್ ಮಾಡಿದ್ದಾರೆ. BJP ನಾಯಕರು ಹಾಗೂ BJP ಪಕ್ಷಕ್ಕೆ ನಾಗರಿಕತೆ ಇದೀಯಾ? ಸಿಎಂ ಅವರು ಮೊನ್ನೆ ರಾತ್ರಿ 9.30ಕ್ಕೆ ಕರೆ ಮಾಡಿದ್ದಾರೆ. ಮಧ್ಯರಾತ್ರಿ ಸಮಯದಲ್ಲಿ ದೇವೇಗೌಡರು ಮಲಗಿದ್ದಾಗ ಲೆಟರ್ ಕೊಟ್ಟು ಹೋಗಿದ್ದಾರೆ. ಅದರಲ್ಲಿ ಮಾನ್ಯರೇ ಅಂತಾ ಇದೆ. ಆದರೆ ದೇವೇಗೌಡರ ಹೆಸರನ್ನ ಕೆಳಗೆ ಹಾಕಿದ್ದಾರೆ ಎಂದ್ರು ಆಕ್ರೋಶ ಹೊರಹಾಕಿದ್ರು. ಬಿಜೆಪಿಯವರು ಕನ್ನಡವರನ್ನ ಗುಲಾಮರನ್ನಾಗಿ ಮಾಡಲು ಹೊರಟಿದ್ದಾರೆ. ಹಿಂದಿ ಹೇರಿಕೆಗಾಗಿ ಪ್ರತಿನಿತ್ಯ ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದ್ರು