ಅಶೋಕ್​​ ವಿರುದ್ಧ HDK ತೀವ್ರ ವಾಗ್ದಾಳಿ

Webdunia
ಗುರುವಾರ, 27 ಅಕ್ಟೋಬರ್ 2022 (16:58 IST)
SC/STಯವರಿಗೆ ಮೀಸಲಾತಿಯನ್ನು ನಮ್ಮ ಗಂಡೆದೆ ಸಿಎಂ ಬೊಮ್ಮಾಯಿ ಅವರಿಂದ ಮಾತ್ರ ಕೋಡೊಕೆ ಸಾಧ್ಯ ಆಯ್ತು ಎಂದು ಸಚಿವ ಅಶೋಕ್ ಹೇಳಿದ್ರು. ಈ ವಿಚಾರದ ಕುರಿತಾಗಿ ಮಾಜಿ ಸಿಎಂ H.D.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗಂಡೆದೆ ಮುಖ್ಯಮಂತ್ರಿ ಆಗಿದ್ದವರು‌ ಎರಡು ವರ್ಷ ಯಾಕೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ.. ಇದೊಂದು ಚುನಾವಣೆ ಸ್ಟಂಟ್ ಅಷ್ಟೆ. ST ಸಮುದಾಯಕ್ಕೆ ಮೀಸಲಾತಿ ಅಂತ ಕೊಟ್ಟವರು ದೇವೇಗೌಡರು.ದೇವೇಗೌಡ ಮುಂದೆ ಯಾವುದೇ ಗಂಡೆದೆ ಮುಖ್ಯಮಂತ್ರಿ ಇಲ್ಲ ಎಂದು ವಾಗ್ದಾಳಿ ನಡೆಸಿದ್ರು. ಮುಂದುವರಿದು ಮಾತನಾಡಿದ ಅವರು ಚುನಾವಣೆ ಹತ್ತಿರ ಬಂದಾಗ ಮೀಸಲಾತಿ ಕೊಟ್ಟಿದ್ದಾರೆ. ಇವರಿಗೆ ಗಂಡೆದೆ ಇದ್ದಿದ್ದರೆ ಪ್ರಸನ್ನಾನಂದಪುರಿ ಸ್ವಾಮೀಜಿಯನ್ನು ಯಾಕೆ 252 ದಿನ ಧರಣಿ ಕೂರಿಸುತ್ತಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ. ಅವರು ಮೀಸಲಾತಿ ನೀಡಿದ್ರಲ್ಲಿ ನಮ್ಮ ಸಹಕಾರವೂ ಇದೆ. ನಮ್ಮ ಸಹಕಾರದಿಂದ ಅವರ ಗಂಡೆದೆ ಹೊರ ಬಂದಿದೆ. ಇಲ್ಲದೆ ಹೋಗಿದ್ರೆ ಹೆಣ್ಣೆದೆ ಹೊರಗೆ ಬರ್ತಿತ್ತು ಎಂದ HDK ತಕ್ಷಣ ಮಾತು ಬದಲಿಸಿ ನನಗೆ ಹೆಣ್ಣು ಮಕ್ಕಳ ಬಗ್ಗೆ ಗೌರವ ಇದೆ ಎಂದು ಮಾತನ್ನು ತೇಲಿಸಿದ್ರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೆದ್ದಾರಿಯನ್ನೇ ಬ್ಲಾಕ್ ಮಾಡಿದ ಹುಲಿ, ಜಪ್ಪಯ್ಯ ಎಂದರೂ ದಾರಿ ಬಿಡಲಿಲ್ಲ: ವೈರಲ್ ವಿಡಿಯೋ

ಹಾಂಗ್‌ಕಾಂಗ್‌ನಲ್ಲಿ ಬೆಂಕಿ ಅವಘಡ, 128ಕ್ಕೆ ಏರಿದ ಮೃತರ ಸಂಖ್ಯೆ, ಇನ್ನೂ 200ಮಂದಿ ನಾಪತ್ತೆ

ಒಕ್ಕಲಿಗರಿಗೆ ಅವಕಾಶ ಸಿಗುವ ಸಮಯ ಬಂದಿದೆ: ಡಿಕೆಶಿ ಮನೆಗೆ ಒಕ್ಕಲಿಗ ಸ್ವಾಮೀಜಿ ಭೇಟಿ

ಭಾರತಕ್ಕೆ ರಷ್ಯಾ ಅಧ್ಯಕ್ಷರನ್ನು ಸ್ವಾಗತಿಸಿದ ಪ್ರಧಾನಿ ಮೋದಿ, ಯಾವಾ ಕಾರಣಕ್ಕೆ ಗೊತ್ತಾ

ಒಂದು ಸಿಗರೇಟ್ ಕಿಡಿಯಿಂದ ಭಸ್ಮವಾಯಿತು 7 ಗೂಡಂಗಡಿಗಳು

ಮುಂದಿನ ಸುದ್ದಿ
Show comments