Publish Date: Thu, 27 Oct 2022 (16:40 IST)
Updated Date: Thu, 27 Oct 2022 (16:42 IST)
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ನಾಲ್ಕು ದಿನಗಳ ಬಿಡುವಿನ ನಂತರ ಇಂದು ತೆಲಂಗಾಣದ ನಾರಾಯಣ್ ಪೇಟೆ ಜಿಲ್ಲೆಯ ಮುಕ್ತಾಲ್ನಿಂದ ಮತ್ತೆ ಪ್ರಾರಂಭಗೊಂಡಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವತ್ ರೆಡ್ಡಿ, ಸಂಸದ ಉತ್ತಮ್ ಕುಮಾರ್ ರೆಡ್ಡಿ, CLP ನಾಯಕ ಭಟ್ಟಿ ವಿಕ್ರಮಾರ್ಕ ಮತ್ತು ಪಕ್ಷದ ಹಲವಾರು ಮುಖಂಡರು ರಾಹುಲ್ ಗಾಂಧಿ ಅವರೊಂದಿಗೆ ಬೆಳಗ್ಗೆ 6.30ಕ್ಕೆ ಮುಕ್ತಾಲ್ನಿಂದ ಯಾತ್ರೆ ಆರಂಭಿಸಿದರು. ತೆಲಂಗಾಣದಲ್ಲಿ ಇದು ಯಾತ್ರೆಯ ಎರಡನೇ ದಿನ. ಯಾತ್ರೆ ಅಕ್ಟೋಬರ್ 23ರಂದು ಬೆಳಗ್ಗೆ ಕರ್ನಾಟಕದ ರಾಯಚೂರಿನಿಂದ ನಿರ್ಗಮಿಸಿ, ಗುಳ್ಳೆಬೆಳ್ಳೂರು ಮೂಲಕ ತೆಲಂಗಾಣವನ್ನು ಪ್ರವೇಶಿಸಿತು. ಇಂದು 26.7 ಕಿಲೋಮೀಟರ್ ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.