Publish Date: Thu, 27 Oct 2022 (16:28 IST)
Updated Date: Thu, 27 Oct 2022 (16:40 IST)
2023ರ ಚುನಾವಣೆಗೆ JDS ಮೆಗಾ ಪ್ಲ್ಯಾನ್ ಮಾಡ್ತಿದೆ. ಇಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲದಿಂದ ಪಂಚರತ್ನ ರಥಯಾತ್ರೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ರು. ನವೆಂಬರ್ 1ರಂದು ಮೊದಲ ಹಂತದ ಕಾರ್ಯಕ್ರಮ ಆರಂಭವಾಗಲಿದ್ದು, ಜಿಲ್ಲೆಗಳಿಗೆ ಪ್ರವಾಸಕೈಗೊಂಡು ಶಿಕ್ಷಣ, ಉದ್ಯೋಗ, ಕೃಷಿ, ನೀರಾವರಿ, ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ತುಮಕೂರು, ಹಾಸನ, ರಾಮನಗರದಲ್ಲಿ ಪ್ರವಾಸ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲು JDS ಮುಂದಾಗಿದೆ. ಮೊದಲ ಹಂತದಲ್ಲಿ 35 ದಿನಗಳು ಪ್ರವಾಸ ಮಾಡಲಿರುವ HDK, ರಥಯಾತ್ರೆಯ ವೇಳೆ ಗ್ರಾಮವಾಸ್ತವ್ಯ ಮಾಡಲಿದ್ದಾರೆ. JDS ಅಧಿಕಾರಕ್ಕೆ ಬಂದ್ರೆ ಶಿಕ್ಷಣ, ಉದ್ಯೋಗ, ಕೃಷಿ, ನೀರಾವರಿ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಲಿದ್ದಾರೆ.