Select Your Language

Notifications

webdunia
webdunia
webdunia
webdunia

ಹಾಸನಾಂಬೆ ದೇಗುಲ ಬಂದ್

Hassanambe Temple Bandh
haasaana , ಗುರುವಾರ, 27 ಅಕ್ಟೋಬರ್ 2022 (16:46 IST)
ಹಾಸನಾಂಬೆ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಾಲಯದ ಆವರಣದಲ್ಲಿ ಕೆಂಡೋತ್ಸವ ಮಾಡಲಾಯಿತು. ಸಿದ್ದೇಶ್ವರ ಸ್ವಾಮಿ ಉತ್ಸವ ನಡೆದ ಬಳಿಕ ಕೆಂಡೋತ್ಸವ ಆರಂಭ ಮಾಡಲಾಯಿತು. ನಂತರ ಕೆಂಡೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಇಂದು ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲು 12 ಗಂಟೆ ಸುಮಾರಿಗೆ ಬಂದ್ ಮಾಡಲಾಯಿತು. ಪುರೋಹಿತರು ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ಮುಚ್ಚಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಗರ್ಭಗುಡಿ ಬಾಗಿಲು ಕ್ಲೋಸ್ ಮಾಡಲಾಯಿತು. ಸುಮಾರು 11 ಗಂಟೆಯವರೆಗೂ ಹಾಸನಾಂಬೆಗೆ ನೈವೇದ್ಯ ನೆರವೇರಿತು. ತದನಂತರ 11 ಗಂಟೆಯಿಂದ ಗರ್ಭಗುಡಿ ಕ್ಲೋಸ್ ಮಾಡೋದಕ್ಕೆ ವಿಧಿವಿಧಾನಗಳು ನೆರವೇರಿದ್ವು.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ದರ ನಿಗದಿಗೆ ಸರ್ಕಾರ ನಿರ್ಧಾರ