Select Your Language

Notifications

webdunia
webdunia
webdunia
webdunia

ಮೋದಿ ವಿರುದ್ಧ HDD ಅಸಮಾಧಾನ

ಮೋದಿ ವಿರುದ್ಧ HDD ಅಸಮಾಧಾನ
ಹಾಸನ , ಗುರುವಾರ, 4 ಮೇ 2023 (20:00 IST)
ಹಾಸನದ ಬೇಲೂರಿಗೆ ಭೇಟಿ ನೀಡಿದ್ದ ವೇಳೆ ಜೆಡಿಎಸ್ ಕಾಂಗ್ರೆಸ್​​​ನ ಬಿ ಟೀಮ್​​​ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಪ್ರಧಾನಿ H.D. ದೇವೇಗೌಡರು ಅಸಮಾಧಾನ ಹೊರಹಾಕಿದ್ದಾರೆ.. ಹಾಸನದ ಗಂಡಸಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರಿಂದ ಇಂತಹ ಮಾತನ್ನು ನಾನು ನಿರೀಕ್ಷೆ ಮಾಡಿರಲಿಲ್ಲ.. ಕಳೆದ ಬಾರಿ ಹಾಸನದಲ್ಲಿ ಕಾಂಗ್ರೆಸ್​​ ನಾಯಕ ರಾಹುಲ್ ಗಾಂಧಿ ಏನು ಹೇಳಿದ್ರು ನೆನಪಿದೆ ಅಲ್ವಾ? ಕಳೆದ ಬಾರಿ ಅವರು ಮಾಡಿದ ಕೆಲಸ ಈ ಬಾರಿ ಮೋದಿ ಮಾಡಿದ್ದಾರೆ.. ಇದರಲ್ಲಿ ವ್ಯತ್ಯಾಸ ಏನಿಲ್ಲ ಎಂದ್ರು.. ರಾಹುಲ್ ಓರ್ವ ಯುವಕ, ಮೋದಿ ಮೆಚ್ಯೂರ್ಡ್​​ ಮ್ಯಾನ್.. ರಾಹುಲ್ ಓರ್ವ ಯಂಗ್ ಸ್ಟಾರ್...ಮಾತಾಡಿದ್ರು. ಆದರೆ ಮೋದಿಯವರು ಪ್ರಧಾನಿಯಾದವರು, ಹತ್ತು ವರ್ಷ ಪ್ರಧಾನಿಯಾಗಿ ಈ ದೇಶ ಆಳಿದವರು.. ಜೆಡಿಎಸ್ ಬಗ್ಗೆ ಇಷ್ಟು ಹಗುರವಾಗಿ ಮಾತಾಡೋದು ಅವರಿಗೆ ಶೋಭೆ ತರೋದಿಲ್ಲ ಎಂದು ಮಾಜಿ ಪ್ರಧಾನಿ H.D.ದೇವೇಗೌಡ ಬೇಸರ ವ್ಯಕ್ತಪಡಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಹಾಕಿದ ಈಶ್ವರಪ್ಪ