Publish Date: Thu, 04 May 2023 (18:10 IST)
Updated Date: Thu, 04 May 2023 (17:54 IST)
ಗುಜರಾತ್ ಮಗನೆಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ, ಮೋದಿಗೆ ಯಾವ ರೀತಿ ಗುಜರಾತ್ನಲ್ಲಿ ಆರಿಸಿ ತಂದ್ರೋ ಗೊತ್ತಿಲ್ಲ ಅಂತಾ ಮೋದಿ ವಿರುದ್ದ AICC ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ... ಯಾದಗಿರಿ ಜಿಲ್ಲೆಯ ಸುರಪುರದಲ್ಲಿನ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಮಣ್ಣಿನ ಮಗ, ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿ ನನಗೆ ಶಕ್ತಿ ತುಂಬಬೇಕು.. ಬಿಜೆಪಿ, ಸಂವಿಧಾನದಲ್ಲಿ ಇರುವುದನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ.. ಬಡವರಿಗೆ ಎಲ್ಲರ ಕಾಳಜಿ ಮಾಡಿದ್ದು ಕಾಂಗ್ರೆಸ್.. 40 ಪರ್ಸೆಂಟ್ ಸರ್ಕಾರಕ್ಕೆ ಪಾಠ ಕಲಿಸಲು ಬಿಜೆಪಿಗೆ ಸರಿಯಾದ ಪಾಠ ಕಲಿಸಿ, ಲಂಚ ಹೊಡೆದ ಬಿಜೆಪಿ ಸರ್ಕಾರ ತೆಗೆದು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿಕೊಂಡಿದ್ದಾರೆ