Publish Date: Fri, 26 Apr 2024 (14:50 IST)
Updated Date: Fri, 26 Apr 2024 (14:53 IST)
ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಟಿಕೆಟ್ ಎಚ್ ಡಿ ಕುಮಾರಸ್ವಾಮಿ ಪಾಲಾದ ಬಳಿಕ ಹಾಲಿ ಸಂಸದೆ ಸುಮಲತಾ ಅಂಬರೀಶ್ ಒಮ್ಮೆಯೂ ಇಲ್ಲಿ ಪ್ರಚಾರಕ್ಕೆ ಬಂದಿಲ್ಲ. ಇದಕ್ಕೆ ಎಚ್ ಡಿಕೆ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಅದರಂತೆ ಮಂಡ್ಯ ಕ್ಷೇತ್ರದ ಟಿಕೆಟ್ ಗಾಗಿ ಕುಮಾರಸ್ವಾಮಿ ಬೇಡಿಕೆಯಿಟ್ಟಿದ್ದರು. ಅತ್ತ ಸುಮಲತಾ ಕೂಡಾ ಮಂಡ್ಯದಲ್ಲಿಯೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಕೊನೆಗೆ ಕುಮಾರಸ್ವಾಮಿ ಪಾಲಾಯಿತು.
ಇದು ಸುಮಲತಾ ಅಸಮಾಧಾನಕ್ಕೆ ಕಾರಣವಾಗಿತ್ತು. ಹಾಗಿದ್ದರೂ ಸುಮಲತಾ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ ಕುಮಾರಸ್ವಾಮಿ ಪರ ಮಂಡ್ಯದಲ್ಲಿ ಪ್ರಚಾರ ನಡೆಸಲು ಬಂದಿರಲಿಲ್ಲ. ನನ್ನನ್ನು ಯಾರೂ ಕರೆದಿಲ್ಲ ಅದಕ್ಕೆ ಬಂದಿಲ್ಲ ಎಂದು ಸುಮಲತಾ ಹೇಳಿಕೊಂಡಿದ್ದರು.
ಇದು ಎಚ್ ಡಿಕೆ ಅಸಮಾಧಾನಕ್ಕೆ ಕಾರಣವಾಗಿದೆ. ಸುಮಲತಾ ಮನೆಗೇ ಹೋಗಿ ಸಹಕಾರ ಕೊಡುವಂತೆ ಕೇಳಿದ್ದೆ. ಇನ್ನು ಹೇಗೆ ಕರೆಯಬೇಕಿತ್ತು. ಮಂಡ್ಯದಲ್ಲಿ ಅಂಬರೀಶ್ ಅಭಿಮಾನಿಗಳು ನನಗೆ ಸಹಕಾರ ಕೊಟ್ಟಿದ್ದಾರೆ. ಆದರೆ ಸುಮಲತಾ ಬರಲಿಲ್ಲ ಎಂದು ಎಚ್ ಡಿಕೆ ಅಸಮಾಧಾನ ಹೊರಹಾಕಿದ್ದಾರೆ.