Select Your Language

Notifications

webdunia
webdunia
webdunia
webdunia

ಪಕ್ಷ ಹೇಳಿದರೆ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತೇನೆಂದ ಸುಮಲತಾ ಅಂಬರೀಶ್

Sumalatha Ambareesh

Sampriya

ಉಡುಪಿ , ಶುಕ್ರವಾರ, 19 ಏಪ್ರಿಲ್ 2024 (17:57 IST)
ಉಡುಪಿ: ಪಕ್ಷ ಹೇಳಿದರೆ ಕುಮಾರಸ್ವಾಮಿ ಪರ ಖಂಡಿತ ಪ್ರಚಾರ ಮಾಡುತ್ತೇನೆ. ನಾನು ಯಾರ ಪರ ಪ್ರಚಾರ ಮಾಡಬೇಕೆಂದು ಪಕ್ಷ ನಿರ್ಧಾರಿಸುತ್ತದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

ಇಂದು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ನಾನು ಯಾವ ರೀತಿ ಪ್ರಚಾರ ಮಾಡಬೇಕು ಎಂದು ಪಕ್ಷ ಡಿಸೈಡ್ ಮಾಡುತ್ತದೆ. ನಾನು ನಾನಾಗಿಯೇ ಎಲ್ಲಿಗೂ ಹೋಗಿಲ್ಲ. ಪಕ್ಷ ಹೇಳಿದರೆ ಕುಮಾರಸ್ವಾಮಿ ಪರ ಖಂಡಿತ ಪ್ರಚಾರ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇನ್ನೂ ಸುಮಲತಾ ಕಾಂಗ್ರೆಸ್ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಂಸದೆಯಾಗಿರುವ ನನನ್ನು ಶಾಸಕರು ಭೇಟಿಯಾಗುತ್ತಾರೆ.  ಸಮಾರಂಭದಲ್ಲಿ ನಾವೆಲ್ಲ ಭೇಟಿಯಾಗುತ್ತೇವೆ. ಈ ರೀತಿಯ ವದಂತಿ ಚುನಾವಣೆ ಸಂದರ್ಭದಲ್ಲಿ ಇದು ಸಾಮಾನ್ಯ. ನನ್ನ ಚುನಾವಣೆ ವೇಳೆ ಸುಳ್ಳು ಮಾಹಿತಿ, ಸುಳ್ಳು ಪ್ರಚಾರ ಮಾಡಿದ್ದರು. ನಾನಂತೂ ಯಾರನ್ನು ಭೇಟಿ ಮಾಡಿಲ್ಲ. ಮಂಡ್ಯದಲ್ಲಿ ಒಳ್ಳೆ ರಿಸಲ್ಟ್ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅವಹೇಳನಕಾರಿ ಜಾಹೀರಾತು: ಕಾಂಗ್ರೆಸ್, ಡಿಕೆಶಿ ವಿರುದ್ಧ ಬಿಜೆಪಿ ದೂರು