Select Your Language

Notifications

webdunia
webdunia
webdunia
webdunia

ಹೆಣ್ಣು ಮಕ್ಕಳ ಬದುಕಿಗೆ ಮೊದಲು ಗ್ಯಾರಂಟಿ ನೀಡಲಿ: ಸಿಎಂ ಸಿದ್ದರಾಮಯ್ಯಗೆ ಆರ್‌.ಅಶೋಕ್ ಸವಾಲ್

R Ashok

Sampriya

ಬೆಂಗಳೂರು , ಶುಕ್ರವಾರ, 19 ಏಪ್ರಿಲ್ 2024 (14:56 IST)
ಬೆಂಗಳೂರು: ಹೆಣ್ಣು ಮಕ್ಕಳಿಗೆ ಆ ಗ್ಯಾರೆಂಟಿ ಕೊಟ್ಟಿದ್ದೇವೆ, ಈ ಗ್ಯಾರೆಂಟಿ ಕೊಟ್ಟಿದ್ದೇವೆ ಎಂದು ಹಾದಿ ಬೀದಿಯಲ್ಲಿ ಭಜನೆ ಮಾಡುವ ಸಿಎಂ ಸಿದ್ದರಾಮಯ್ಯ ಅವರು ಮೊದಲು ಹೆಣ್ಣು ಮಕ್ಕಳ ಬದುಕಿಗೆ ಗ್ಯಾರೆಂಟಿ ನೀಡಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಗುರುವಾರ ಹುಬ್ಬಳ್ಳಿಯ ಬಿವಿಎ ಕಾಲೇಜು ಆವರಣದಲ್ಲಿ ಮಹಾನಗರ ಪಾಲಿಕೆ ಸದಸ್ಯೆಯ ಮಗಳ ಕೊಲೆ ಪ್ರಕರಣ ಸಂಬಂಧ ಎಕ್ಸ್‌ನಲ್ಲಿ ಬರೆದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

'ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಮುಸ್ಲಿಂ ಯುವಕರು ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಿಂದೂ ಯುವಕರ ಮೇಲೆ ಹಲ್ಲೆ ಮಾಡಿದ ಘಟನೆಯಾಗಿ ಇನ್ನೂ 48 ಗಂಟೆಗಳೂ ಕಳೆದಿಲ್ಲ, ಅಷ್ಟರಲ್ಲೇ  ಮತಾಂಧರ ಮತ್ತೊಂದು ಮಸಲತ್ತು ಬೆಳಕಿಗೆ ಬಂದಿದೆ.

ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಹುಬ್ಬಳ್ಳಿ ಮಹಾನಗರ ಪಾಲಿಕೆ ಸದಸ್ಯರ ಮಗಳನ್ನು ಮುಸ್ಲಿಂ ಯುವಕ ಚಾಕುವಿನಿಂದ ಇರಿದು ಕೊಲೆ ಮಾಡಿರುವ ದಾರುಣ ರಾಜ್ಯದಲ್ಲಿ ಮತಾಂಧರು ಯಾವ ಮಟ್ಟಕ್ಕೆ ಅಟ್ಟಹಾಸ ಮೆರೆಯುತ್ತಿದ್ದಾರೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ.

ಸಿಎಂ @siddaramaiah
 ನವರ ನೇತೃತ್ವದ @INCKarnataka
 ಸರ್ಕಾರದ ತುಷ್ಟೀಕರಣ, ಓಲೈಕೆ ರಾಜಕಾರಣದಿಂದ ರಾಜ್ಯದಲ್ಲಿ ಮತಾಂಧರಿಗೆ, ಮೂಲಭೂತವಾದಿಗಳಿಗೆ ರೆಕ್ಕೆ-ಪುಕ್ಕ ಬಂದಿದ್ದು ಕಾನೂನಿನ ಭಯವೇ ಇಲ್ಲದಂತಾಗಿದೆ.

ಯಾವುದೇ ಮುಲಾಜಿಲ್ಲದೆ ಈ ಕೂಡಲೇ ಆ ರಾಕ್ಷಸನನ್ನು ಬಂಧಿಸಿ ಕಾನೂನಿನ ವಶಕ್ಕೆ ಒಪ್ಪಿಸಬೇಕು. ಶಿಕ್ಷೆ ಆಗುವವರೆಗೂ ಬಿಡಬಾರದು.

ಹೆಣ್ಣು ಮಕ್ಕಳಿಗೆ ಆ ಗ್ಯಾರೆಂಟಿ ಕೊಟ್ಟಿದ್ದೇವೆ, ಈ ಗ್ಯಾರೆಂಟಿ ಕೊಟ್ಟಿದ್ದೇವೆ ಎಂದು ಹಾದಿ ಬೀದಿಯಲ್ಲಿ ಭಜನೆ ಮಾಡುವ ಸಿಎಂ @siddaramaiah
 ಹಾಗು ಡಿಸಿಎಂ @DKShivakumar
 ಅವರು ಮೊದಲು ಹೆಣ್ಣುಮಕ್ಕಳ ಬದುಕಿಗೆ ಗ್ಯಾರೆಂಟಿ ನೀಡಲಿ, ಹೆಣ್ಣು ಮಕ್ಕಳ ಸುರಕ್ಷತೆಗೆ ಗ್ಯಾರೆಂಟಿ ಕೊಡಲಿ' ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಂಧಿನಗರದಿಂದ ನಾಮಪತ್ರ ಸಲ್ಲಿಸಿದ ಗೃಹಸಚಿವ ಅಮಿತ್ ಶಾ