Select Your Language

Notifications

webdunia
webdunia
webdunia
webdunia

ಕುಂದಾನಗರಿ ಸುತ್ತಿದ ಹೆಚ್.ಡಿ.ಕುಮಾರಸ್ವಾಮಿ

ಕುಂದಾನಗರಿ ಸುತ್ತಿದ ಹೆಚ್.ಡಿ.ಕುಮಾರಸ್ವಾಮಿ
ಬೆಳಗಾವಿ , ಭಾನುವಾರ, 11 ಆಗಸ್ಟ್ 2019 (17:11 IST)
ಕುಂದಾನಗರಿಗೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಸಂತ್ರಸ್ಥರು ಮನವಿಗಳ ಮಹಾಪೂರ ನೀಡಿದ್ರು.

ಬೆಳಗಾವಿಗೆ ಆಗಮಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ನೆರೆ ಪೀಡಿತ ಪ್ರದೇಶಗಳಿಗೆ ಹೋಗಿ ಪರಿಶೀಲನೆ ನಡೆಸಿದ್ರು.  ಈ ವೇಳೆ ಜನರು, ನೆರೆಯಿಂದ ಉಂಟಾಗಿರುವ ಸಮಸ್ಯೆ ಬಗೆಹರಿಸಿ ಪರಿಹಾರ ವಿತರಿಸುವಂತೆ ಆಗ್ರಹಿಸಿದ್ರು.

ಮಾಜಿ ಸಿಎಂ ಕುಮಾರಸ್ವಾಮಿಯವರು ನೇಕಾರ ಕಾಲನಿ, ಸಾಯಿನಗರ, ವಡಗಾಂವ, ಮರಾಠಾ ಕಾಲನಿ, ಹಳೇ ಪಿಬಿ ರಸ್ತೆ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳಿ ಪರಿಶೀಲಿಸಿದ್ರು.  ಜನರಿಗೆ ಉಂಟಾದ ಸಮಸ್ಯೆಯನ್ನ ಆಲಿಸಿದರು.

ಹುಕ್ಕೇರಿ ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ತೆರಳಿ ಸಮೀಕ್ಷೆ ನಡೆಸಿದರು. ಪ್ರವಾಹ ಪೀಡಿತ ಪ್ರದೇಶಕ್ಕೆ ತೆರಳುತ್ತಿದ್ದಂತೆ ಪ್ರವಾಹ ಪೀಡಿತ ಜನರು ಕುಮಾರಸ್ವಾಮಿಯವರ ಮುಂದೆ ಮುಗಿಬಿದ್ದು, ತಮಗೆ ಉಂಟಾಗಿರುವ ಸಮಸ್ಯೆಯನ್ನ ತಿಳಿಸಿದ್ರು.

ಭಾರಿ ಮಳೆಯಿಂದಾಗಿ ನಮ್ಮ ಜನಜೀವನ ಅಸ್ತವ್ಯಸ್ಥಗೊಂಡಿದೆ. ನಮಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು. ನಂತರ ಸಂಕೇಶ್ವರದಲ್ಲಿ ಧುಮ್ಮುಕ್ಕಿ ಹರಿಯುತ್ತಿರುವ ಹಿರಣ್ಯಕೇಶಿ ನದಿಯ ವೀಕ್ಷಣೆ ಮಾಡಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಒಂದೆಡೆ ಪ್ರವಾಹ; ಮತ್ತೊಂದೆಡೆ ಸ್ಮಾರ್ಟ್ ಸಿಟಿಗೆ ಚಾಲನೆ ನೀಡಿದ ಕೇಂದ್ರ ಸಚಿವ