Publish Date: Fri, 20 Dec 2019 (18:38 IST)
Updated Date: Fri, 20 Dec 2019 (18:40 IST)
ಮಂಗಳೂರು ಗೋಲಿಬಾರ್ ಘಟನೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.
ಅಧಿಕಾರದ ದಾಹ ಹಾಗೂ ಅಮಲಿನಲ್ಲಿರೋರ ದಾಹ, ಕ್ರೌರ್ಯಕ್ಕೆ ಜನರ ಹೆಣಗಳು ಬೀಳುತ್ತಿವೆ. ಅಮಾಯಕ ಹೋರಾಟಗಾರರನ್ನು ಸರಕಾರವೇ ಮುಂದೆ ನಿಂತು ಕೊಲೆಮಾಡಿಸಿದೆ.
ಹೀಗಂತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಹೋರಾಟ ಮಾಡಿ ಮೇಲೆ ಬಂದಿರೋ ಯಡಿಯೂರಪ್ಪ ಇದೀಗ ಹೋರಾಟಗಾರನ್ನು ಕಂಡರೆ ಗುಂಡು ಹೊಡೆಯೋಕೆ ಆದೇಶ ನೀಡ್ತಿರೋದು ಸರಿಯಲ್ಲ ಎಂದಿದ್ದಾರೆ.
ಅನರ್ಹ ಅಧಿಕಾರದ ಮದ ಯಡಿಯೂರಪ್ಪರ ತಲೆಗೆ ಹತ್ತಿದೆ ಅಂತ ಹೆಚ್.ಡಿ.ಕೆ ವಾಗ್ದಾಳಿ ನಡೆಸಿದ್ದಾರೆ.