Publish Date: Sat, 16 Mar 2024 (10:22 IST)
Updated Date: Sat, 16 Mar 2024 (10:24 IST)
ಮಂಡ್ಯ: ನಾನು ಬೇಗ ಸಾಯಲ್ಲ, ನನಗೆ 84 ವರ್ಷ ಆಯಸ್ಸಿದೆ ಎಂದು ಜ್ಯೋತಿಷಿಗಳೇ ಹೇಳಿದ್ದಾರೆ ಎಂದು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.
ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಭಾವುಕರಾಗಿ ಮಾತನಾಡಿದ್ದಾರೆ. ನನಗೆ ಮಾರ್ಚ್ 21 ಕ್ಕೆ ಒಂದು ಆಪರೇಷನ್ ಇದೆ. ಆದರೆ ನಾನು ಅಷ್ಟು ಬೇಗ ಸಾಯಲ್ಲ. ನನ್ನ ಜನರ ಋಣ ತೀರಿಸಿಯೇ ಮಣ್ಣಿಗೆ ಹೋಗುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯ ಕ್ಷೇತ್ರದಲ್ಲಿ ಈ ಬಾರಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯಲಿರುವುದಾಗಿ ಅವರು ಈ ವೇಳೆ ಸೂಚನೆ ಕೊಟ್ಟಿದ್ದಾರೆ. ಸ್ವಾಭಿಮಾನ ಎಂದು ಮಾತಿನಲ್ಲಿ ಹೇಳಿದರೆ ಸಾಲದು, ಕೆಲಸದಲ್ಲೂ ಇರಬೇಕು ಎಂದ ಅವರು ಸುಮಲತಾಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಮಂಡ್ಯ ಜನರ ಋಣ ನನ್ನ ಮೇಲಿದೆ. ಜನರ ಋಣ ತೀರಿಸಿದ ಮೇಲೆಯೇ ನಾನು ಮಣ್ಣಿನಲ್ಲಿ ಮಣ್ಣಾಗಿ ಹೋಗುವುದು. ಅಲ್ಲಿಯವರೆಗೂ ಜನರ ಸೇವೆ ಮಾಡುತ್ತಲೇ ಇರುತ್ತೇನೆ. ದೇವೇಗೌಡರೂ ಜ್ಯೋತಿಷಿಗಳ ಮಾತು ಕೇಳಿಯೇ ಬದುಕಿದ್ದಾರೆ. ನಾನು ಜ್ಯೋತಿಷಿಗಳ ಮಾತು ನಂಬುವುದಾಗಿ ಅವರು ಹೇಳಿದ್ದಾರೆ.