ಸೂರಜ್ ರೇವಣ್ಣ ಬಗ್ಗೆ ಏನೂ ಕೇಳ್ಬೇಡಿ: ಗರಂ ಆದ ಎಚ್ ಡಿ ಕುಮಾರಸ್ವಾಮಿ

Krishnaveni K
ಶನಿವಾರ, 22 ಜೂನ್ 2024 (13:59 IST)
ಬೆಂಗಳೂರು: ಇಂದು ಎನ್ ಡಿಎ ಸಂಸದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಗೆ ಸೂರಜ್ ರೇವಣ್ಣ ಬಗ್ಗೆ ಪ್ರಶ್ನಿಸಿದಾಗ ಅವರು ಸಿಡಿಮಿಡಿಗೊಂಡರು.

ಸಹೋದರ ಎಚ್ ಡಿ ರೇವಣ್ಣ ಕುಟುಂಬ ಲೈಂಗಿಕ ಕಿರುಕುಳ ಆರೋಪಕ್ಕೊಳಗಾದ ಬಳಿಕ ಕುಮಾರಸ್ವಾಮಿ ಅಂತರ ಕಾಯ್ದುಕೊಂಡೇ ಬಂದಿದ್ದರು. ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪಗಳ ಸುರಿಮಳೆಯಾಗುತ್ತಿರುವಾಗ ಕುಮಾರಸ್ವಾಮಿ ಅವರ ಕುಟುಂಬಕ್ಕೂ ನಮಗೂ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ನಮ್ಮನ್ನು ಎಳೆಯಬೇಡಿ ಎಂದಿದ್ದರು.

ಇದೀಗ ಮಾಧ್ಯಮಗಳು ಯುವಕನೊಂದಿಗೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೊಳಗಾಗಿರುವ ಸೂರಜ್ ರೇವಣ್ಣ ಬಗ್ಗೆ ಕೇಳಿದಾಗ ಗರಂ ಆಗಿದ್ದಾರೆ. ‘ರಾಜ್ಯದ ಬಗ್ಗೆ ಏನಾದರೂ ಪ್ರಶ್ನೆಯಿದ್ದರೆ ಕೇಳಿ. ಆ ಬಗ್ಗೆ ನನ್ನನ್ನು ಏನೂ ಕೇಳಬೇಡಿ. ಈ ಥರ ಸಮಸ್ಯೆಗಳನ್ನು ನೋಡಿಕೊಳ್ಳಲು ಪೊಲೀಸರು, ಕಾನೂನು ಇದೆ’ ಎಂದರು.

ಇನ್ನು, ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಚುನಾವಣೆಗೆ ನಿಲ್ಲುತ್ತಿರುವ ಬಗ್ಗೆ ಪ್ರಶ್ನಿಸಿದಾಗ ‘ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಡಿಕೆ ಶಿವಕುಮಾರ್ ಆದ್ರೂ ನಿಲ್ಲಲಿ, ಅವರ ಜೊತೆ ಬೇರೆ ನಾಲ್ಕು ಜನ ಬೇಕಾದರೂ ನಿಲ್ಲಲಿ. ನಮಗೆ ಸಂಬಂಧಪಡದ ವಿಷಯ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಫೋಟ ಪ್ರಕರಣ, ನಾಳೆ ಲಾಲ್‌ ಕ್ವಿಲಾ ಮೆಟ್ರೋ ನಿಲ್ದಾಣ ಬಂದ್‌

ದೆಹಲಿ ಕಾರು ಸ್ಫೋಟ: ಅಮಿತ್ ಶಾ ರಾಜೀನಾಮೆಗೆ ಹೆಚ್ಚಿದ ಒತ್ತಾಯ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಲಾಲೋಕ ಮಳಿಗೆ, ಏನೆಲ್ಲಾ ಸಿಗಲಿದೆ ಗೊತ್ತಾ

ಕಾರು ಸ್ಫೋಟದ ಹಿಂದಿನ ಪ್ರತಿಯೊಬ್ಬ ಅಪರಾಧಿಯನ್ನು ಭೇಟೆಯಾಡಿ: ಅಮಿತ್ ಶಾ

ದೆಹಲಿಯಲ್ಲಿ ಕಾರು ಸ್ಫೋಟ: ರಾಜ್ಯದ ಈ ಜಿಲ್ಲೆಯಲ್ಲಿ ಹೆಚ್ಚಿನ ಭದ್ರತೆ

ಮುಂದಿನ ಸುದ್ದಿ