Publish Date: Mon, 21 May 2018 (16:26 IST)
Updated Date: Mon, 21 May 2018 (16:27 IST)
ರಾಮನಗರ, ಚನ್ನಪಟ್ಟಣ ಎರಡು ವಿಧಾನಸಭಾ ಕ್ಷೇತ್ರದಿಂದ ಗೆದಿದ್ದ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಮನಗರ ಬಿಟ್ಟು ಚನ್ನಪಟ್ಟಣ ಉಳಿಸಿಕೊಂಡಿರುವ ಸಂಭಾವ್ಯ ಸಿ.ಎಂ.ಹೆಚ್.ಡಿ.ಕೆ, ಇದೀಗ ರಾಮನಗರದ ಅಭ್ಯರ್ಥಿ ಯಾರು ಎಂಬ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಕಾಂಗ್ರೇಸ್ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುತ್ತಾರಾ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ರೆಬಲ್ ಸ್ಟಾರ್ ಅಂಬರೀಷ್..ಅಥವಾ ಮಧು ಬಂಗಾರಪ್ಪ? ಸ್ಪರ್ಧಿಗಳಾಗಲಿದ್ದಾರೆಯೇ ಎನ್ನುವ ಬಗ್ಗೆ ಕೂಡಾ ಚರ್ಚೆ ನಡೆಯುತ್ತಿದ್ದು ಬಿಜೆಪಿಯಿಂದ ಮತ್ತೆ ಕಣಕ್ಕಿಳಿಯಲು ಚನ್ನಪಟ್ಟಣ ಸೈನಿಕ ಸಿ.ಪಿ.ಯೋಗೇಶ್ವರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.