Publish Date: Sat, 10 Aug 2024 (16:38 IST)
Updated Date: Sat, 10 Aug 2024 (16:44 IST)
ಮೈಸೂರು: ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಮಾವೇಶದಲ್ಲಿ ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಸಿದ್ದರಾಮಯ್ಯ ಪುತ್ರ ಯತೀಂದ್ರರನ್ನು ಮಿಮಿಕ್ರಿ ಮಾಡಿ ಗಮನ ಸೆಳೆದರು.
ಈ ಹಿಂದೆ ಸಿಎಸ್ ಆರ್ ಫಂಡ್ ದುರ್ಬಳಕೆ ವಿಚಾರದಲ್ಲಿ ಯತೀಂದ್ರ ಮತ್ತು ಸಿದ್ದರಾಮಯ್ಯ ಹೆಸರು ಕೇಳಿಬಂದಿತ್ತು. ಯತೀಂದ್ರ ಫೋನ್ ನಲ್ಲೇ ತಮ್ಮ ತಂದೆಗೆ ಅಪ್ಪಯ್ಯ ನಾನು ಹೇಳಿದ ಹೆಸರು ಇಲ್ಲಿಲ್ಲ. ಲಿಸ್ಟ್ ಲ್ಲಿ ಇಲ್ಲದ ಹೆಸರು ಬೇಡ ಎಂದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಈ ವಿಚಾರವನ್ನೇ ಇಂದು ಎಚ್ ಡಿಕೆ ಭಾಷಣದಲ್ಲಿ ಪ್ರಸ್ತಾಪಿಸಿದ್ದು ಥೇಟ್ ಯತೀಂದ್ರ ಸ್ಟೈಲ್ ನಲ್ಲೇ ಅಪ್ಪಯ್ಯ.. ಅಪ್ಪಯ್ಯ.. ಎಂದು ಮಿಮಿಕ್ರಿ ಮಾಡಿ ಅಲ್ಲಿದ್ದವರ ನಗೆಗಡಲಲ್ಲಿ ತೇಲಿಸಿದರು. ಅಪ್ಪ-ಮಗನ ಇಂತಹ ಹಗರಣಗಳು ಸಾಕಷ್ಟಿವೆ. ಆದರೆ ನಾನು ಎಲ್ಲವನ್ನೂ ಹೇಳಕ್ಕೆ ಹೋಗಲ್ಲ ಎಂದರು.
ಇನ್ನು, ನಾನು ಸಿದ್ದರಾಮಯ್ಯಗೆ ಬಂಡೆಯಂತೆ ಎಂದಿದ್ದ ಡಿಕೆ ಶಿವಕುಮಾರ್ ಗೂ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಅದೇ ಬಂಡೆಯಿಂದಲೇ ನಾನು ಕೆಟ್ಟೆ. ಈ ಸಿದ್ದರಾಮಯ್ಯನೂ ಹಾಳಾಗ್ತಾರೆ ಎಂದು ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.