Publish Date: Thu, 08 Jul 2021 (09:31 IST)
Updated Date: Thu, 08 Jul 2021 (09:53 IST)
ಬೆಂಗಳೂರು: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಅಂಬರೀಶ್ ನಡುವಿನ ಟಾಕ್ ವಾರ್ ಬಗ್ಗೆ ಕಾಮೆಂಟ್ ಮಾಡಲು ಜೆಡಿಎಸ್ ವರಿಷ್ಠ, ಎಚ್.ಡಿ. ದೇವೇಗೌಡ ನಿರಾಕರಿಸಿದ್ದಾರೆ.
ಮೊನ್ನೆಯ ಮಾತಿನ ಚಕಮಕಿ ನಿನ್ನೆಯೂ ಮುಂದುವರಿದಿದ್ದು, ಸುಮಲತಾ ಅಂಬರೀಶ್ ನಿನ್ನೆ ಪ್ರಜ್ವಲ್ ರೇವಣ್ಣ ನೋಡಿ ಕುಮಾರಸ್ವಾಮಿ ಕಲಿಯಬೇಕು ಎಂದಿದ್ದು, ಮಾಜಿ ಸಿಎಂ ಕೆರಳಿಸಿದೆ. ಮೊನ್ನೆ ಸುಮಲತಾ ಬಗ್ಗೆ ಹೇಳಿದ ಹೇಳಿಕೆ ಬಗ್ಗೆ ನಾನು ಕ್ಷಮೆ ಕೇಳುವ ಅಗತ್ಯವೇ ಇಲ್ಲ. ಸುಮಲತಾ ನಮ್ಮ ಕುಟುಂಬವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕೆಂಡ ಕಾರಿದ್ದಾರೆ.
ಇವರಿಬ್ಬರ ಟಾಕ್ ವಾರ್ ಬಗ್ಗೆ ಪ್ರಶ್ನಿಸಿದಾಗ ದೇವೇಗೌಡರು, ಇದರ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡಲ್ಲ. ಸುಮಲತಾ ಬಗ್ಗೆ ನಾನೇನೂ ಮಾತನಾಡಲ್ಲ ಎಂದಿದ್ದಾರೆ.