Publish Date: Mon, 30 Apr 2018 (08:51 IST)
Updated Date: Mon, 30 Apr 2018 (08:53 IST)
ಮೈಸೂರು: ಈ ಬಾರಿ ಚುನಾವಣೆಯಲ್ಲಿ ನಮಗೆ ಬಹುಮತ ಬರಬಹುದು ಇಲ್ಲಾ ಬರದೇ ಇರಬಹುದು. ಹೇಗಿದ್ದರೂ ಸರ್ಕಾರ ರಚಿಸೋರು ನಾವೇ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ.
ಹಲವು ಏಜೆನ್ಸಿಗಳಿವೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಹಲವು ಏಜೆನ್ಸಿಗಳು ನಮಗೆ 30, 40 ಸೀಟು ಬರಬಹುದು ಅಂತಾವೆ. ಅದರ ಬಗ್ಗೆ ಚಿಂತೆ ಮಾಡಲ್ಲ. ಬಿಜೆಪಿ, ಕಾಂಗ್ರೆಸ್ ಬೆಂಬಲವಿಲ್ಲದೇ ನಾವು ಈ ಬಾರಿ ಸರ್ಕಾರ ರಚಿಸೋದು ಖಚಿತ ಎಂದು ದೇವೇಗೌಡರು ಹೇಳಿಕೊಂಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ‘ನನ್ನ ಬೆನ್ನಿಗೆ ಚೂರಿ ಹಾಕುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದೆಲ್ಲಾ ಹಿಂದಿನ ಜನ್ಮದ ಪ್ರಾರಬ್ಧ. ಈ ಜನ್ಮದಲ್ಲಿ ನಾನು ಯಾವ ಪಾಪವನ್ನೂ ಮಾಡಿಲ್ಲ’ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.