Select Your Language

Notifications

webdunia
webdunia
webdunia
webdunia

ಕೇರಳ ಚಿಪ್ಸ್ ಚಪ್ಪರಿಸಿಕೊಂಡು ತಿನ್ನುತ್ತಿದ್ದೀರಾ: ಹಾಗಿದ್ದರೆ ಹುಷಾರು

Chips

Krishnaveni K

ಬೆಂಗಳೂರು , ಶನಿವಾರ, 9 ನವೆಂಬರ್ 2024 (10:25 IST)
ಬೆಂಗಳೂರು: ಕೇರಳದಿಂದ ಬರುವ ಚಿಪ್ಸ್, ಹಲ್ವಾ ಸೇರಿದಂತೆ ಕುರುಕಲು ತಿಂಡಿಗಳನ್ನು ಚಪ್ಪರಿಸಿಕೊಂಡು ತಿನ್ನುತ್ತಿದ್ದರೆ ಹುಷಾರಾಗಿರಿ. ರಾಜ್ಯಕ್ಕೆ ಕೇರಳದಿಂದ ಬರುವ ತಿಂಡಿಗಳಲ್ಲಿ ಹಾನಿಕಾರಕ ಅಂಶಗಳು ಪತ್ತೆಯಾಗಿದೆ.

ಕೇರಳದಲ್ಲಿ ತಯಾರಿಸಿ ಕರ್ನಾಟಕದ ಗಡಿ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದಸುಮಾರು 90 ಬಗೆಯ ಕುರುಕಲು ತಿಂಡಿಗಳ ಮಾದರಿಯನ್ನು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಪರೀಕ್ಷೆಗೊಳಪಡಿಸಿದೆ. ಈ ವೇಳೆ 31 ಮಾದರಿ ಆಹಾರಗಳಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿದ್ದು ಅಸುರಕ್ಷಿತ ಎಂದು ತಿಳಿದುಬಂದಿದೆ.

ವಿಶೇಷವಾಗಿ ಕೊಡಗು ಜಿಲ್ಲೆಯಲ್ಲಿ ಮಾರಾಟವಾಗುತ್ತಿದ್ದ ಕೇರಳ ಚಿಪ್ಸ್, ಹಲ್ವಾ, ಮಿಕ್ಸರ್, ಮುರುಕು, ಡ್ರೈ ಫ್ರೂಟ್ಸ್ ಸೇರಿದಂತೆ ವಿವಿಧ ರೀತಿಯ ತಿಂಡಿಗಳಲ್ಲಿ ಹಾನಿಕಾರಕ ಅಂಶ ಪತ್ತೆಯಾಗಿದೆ. ಈ ತಿನಿಸುಗಳಲ್ಲಿ ಸನ್ ಸೇಟ್ ಯೆಲ್ಲೋ, ಅಲ್ಲೂರ ರೆಡ್, ಅಜೋರುಬಿನ್, ಟಾರ್ಟ್ರಾಜಿನ್ ಸೇರಿದಂತೆ ಹಾನಿಕಾರಕ ಕೃತಕ ಬಣ್ಣಗಳನ್ನು ಸೇರಿಸಿರುವುದು ಪತ್ತೆಯಾಗಿದೆ.

ಈ ತಿನಿಸುಗಳು ಕೊಡುಗು ಮಾತ್ರವಲ್ಲದೆ, ಗಡಿ ಜಿಲ್ಲೆಗಳಾದ ಮಂಗಳೂರು, ಕಾಸರಗೋಡು ಜೊತೆಗೆ ರಾಜ್ಯ ರಾಜಧಾನಿ ಬೆಂಗಳೂರಿಗೂ ಮಾರಾಟವಾಗಿರುವ ಶಂಕೆಯಿದೆ. ಈ ಹಾನಿಕಾರಕ ಅಂಶಗಳು ಮನುಷ್ಯನ ದೇಹಕ್ಕೆ ಸೇರಿದತೆ ಕರುಳಿನ ಕ್ಯಾನ್ಸರ್, ಉರಿಯೂತದಂತಹ ಸಮಸ್ಯೆ ಬರಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನಕಪುರದಲ್ಲಿ ಶಾಲೆಗಳಿಗೆ ನಾನು 25 ಎಕರೆ ಜಾಗ ನೀಡಿದ್ದೇನೆ, ದೇವೇಗೌಡರ ಕುಟುಂಬ ಏನ್‌ ಮಾಡಿದ್ದಾರೆ: ಶಿವಕುಮಾರ್