Publish Date: Thu, 04 Jul 2019 (19:15 IST)
Updated Date: Thu, 04 Jul 2019 (19:17 IST)
ಕೈ ಪಡೆಯ ಅತೃಪ್ತ ಶಾಸಕರ ನಿರ್ಧಾರ ಅವರಿಗೆ ಬಿಟ್ಟಿದ್ದು. ಅತೃಪ್ತ ಶಾಸಕರ ಮನವೊಲಿಸೋಕೆ ಮುಂದಾಗೋದಿಲ್ಲ ಅಂತ ಉಪಮುಖ್ಯಮಂತ್ರಿ ಹೇಳುವ ಮೂಲಕ ಮೈತ್ರಿ ಸರಕಾರದ ಅಧಿಕಾರವಧಿಯ ಮೇಲೆ ಕರಿನೆರಳು ಬಿದ್ದಂತಾಗಿದೆ.
ಕಾಂಗ್ರೆಸ್ ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರನ್ನು ತಡೆಯುವುದಿಲ್ಲ. ಹೀಗಂತ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳುವ ಮೂಲಕ ರಾಜಕೀಯ ವಲಯದಲ್ಲಿ ವಿವಿಧ ವ್ಯಾಖ್ಯಾನಗಳು ಶುರುವಾಗಿವೆ.
ಎಲ್ಲದಕ್ಕೂ ಒಂದು ಹಂತ ಇರುತ್ತದೆ. ಅದನ್ನು ದಾಟಿದ ಮೇಲೆ ಏನೂ ಮಾಡಲು ಸಾಧ್ಯ ಇಲ್ಲ. ಅತೃಪ್ತ ಶಾಸಕರ ಮನವೊಲಿಸುವ ಕೆಲಸಕ್ಕೆ ಮುಂದಾಗೋದಿಲ್ಲ ಎಂದ್ರು.
ಸಚಿವ ಡಿ.ಕೆ.ಶಿವಕುಮಾರ ಹೇಳಿಕೆ ನೀಡಿರುವ ಹಿಂದೆಯೇ ಪರಮೇಶ್ವರ್ ಕೂಡ ಅದೇ ಹೇಳಿಕೆ ನೀಡಿರುವುದು ರಾಜಕೀಯ ಅನಿಶ್ಚಿತತೆ ತಲೆದೋರಲು ಕಾರಣವಾಗುತ್ತಿದೆ.