Publish Date: Tue, 02 Jul 2019 (11:53 IST)
Updated Date: Tue, 02 Jul 2019 (11:55 IST)
ಬೆಂಗಳೂರು : ದೋಸ್ತಿಗಳು ರಿವರ್ಸ್ ಆಪರೇಷನ್ ಮಾಡೋದಾದ್ರೆ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೋಸ್ತಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ತಿಂಗಳಿನಿಂದಲೂ ಅದನ್ನೇ ಹೇಳ್ತಿದ್ದಾರೆ. ಅವರು ರಿವರ್ಸ್ ಆಪರೇಷನ್ ಮಾಡೋದಿದ್ದರೆ ಮಾಡಲಿ. ನಮ್ಮವರು ಯಾರೂ ಕಾಂಗ್ರೆಸ್, ಜೆಡಿಎಸ್ಗೆ ಹೋಗಲ್ಲ ಎಂದು ಹೇಳಿದ್ದಾರೆ.
ಅಲ್ಲದೇ ಅಧಿವೇಶನದಲ್ಲಿ ವಿಶ್ವಾಸಮತ ಯಾಚನೆ ಪ್ರಶ್ನೆಯಿಲ್ಲ. ನಾನು ಯಾವ ಶಾಸಕರನ್ನೂ ಸಂಪರ್ಕಿಸಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಸ್ಪಷ್ಟವಾಗಿ ತಿಳಿಸಿದ್ದಾರೆ.