Select Your Language

Notifications

webdunia
webdunia
webdunia
webdunia

ಜಿಂದಾಲ್ ಭೂಮಿ ಪರಭಾರೆ ವಿಚಾರದಲ್ಲಿ ಸರ್ಕಾರಕ್ಕೆ ಎದುರಾಗಿದೆ ಸಂಕಷ್ಟ

ಜಿಂದಾಲ್ ಭೂಮಿ ಪರಭಾರೆ ವಿಚಾರದಲ್ಲಿ ಸರ್ಕಾರಕ್ಕೆ ಎದುರಾಗಿದೆ ಸಂಕಷ್ಟ
ಬೆಂಗಳೂರು , ಮಂಗಳವಾರ, 2 ಜುಲೈ 2019 (10:40 IST)
ಬೆಂಗಳೂರು : ಜಿಂದಾಲ್ ಭೂಮಿ ಪರಭಾರೆ ವಿಚಾರಕ್ಕೆ ಸಂಬಂಧಿಸಿದಂತೆ ಜಿಂದಾಲ್ ಸಂಕಟದಿಂದ ಸರ್ಕಾರ ಹೊರಬರೋದು ಕಷ್ಟ ಎನ್ನಲಾಗಿದೆ.



ಶಾಸಕ ಆನಂದ್ ಸಿಂಗ್ ಜಿಂದಾಲ್ ಭೂಮಿ ವಿಚಾರಕ್ಕೆ ಮನನೊಂದು ರಾಜೀನಾಮೆ ನೀಡಿದ್ದಾರೆ ಎಂಬ ಮಾತು ಕೇಳಿ ಬಂದ ಕಾರಣ ಈ ವಿಚಾರದಲ್ಲಿ ಸರ್ಕಾರದ ಮೇಲೆ ಬಾರೀ ಒತ್ತಡ ಹೇರಲಾಗಿದೆ. ಈ ಹಿನ್ನಲೆಯಲ್ಲಿ ಒಂದು ವೇಳೆ ಒತ್ತಡಕ್ಕೆ ಮಣಿದು ಭೂಮಿ ವಾಪಸ್ ಪಡೆದರೂ ಸರ್ಕಾರಕ್ಕೆ ಸಂಕಷ್ಟ ಎದುರಾಗಲಿದೆ ಎನ್ನಲಾಗಿದೆ.

 

ಹೌದು. ಆನಂದ್ ಸಿಂಗ್ ಬೇಡಿಕೆಗೆ ಅಸ್ತು ಎಂದು ಭೂಮಿ ಪರಭಾರೆ ಕೈಬಿಟ್ಟರೆ ಸರ್ಕಾರದ ವಿರುದ್ಧವೇ ಕಾನೂನು ಸಮರಕ್ಕೆ ಜಿಂದಾಲ್ ಸಿದ್ಧವಾಗಿದೆ ಎನ್ನಲಾಗಿದೆ. ಜಿಂದಾಲ್ ಈಗಾಗಲೇ ವಿವಿಧ ರೂಪದಲ್ಲಿ  3667 ಎಕರೆ ಭೂಮಿ ಮೇಲೆ ರೂ8 ಸಾವಿರ ಕೋಟಿ ಹೂಡಿಕೆ ಮಾಡಿದೆ. ಈ ಹಿನ್ನಲೆಯಲ್ಲಿ ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ ಎನ್ನಲಾಗಿದೆ.
 


Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕರ ರಾಜೀನಾಮೆ ಹಿಂದೆ ಮೋದಿ, ಅಮಿತ್ ಶಾ ಕೈವಾಡವಿಲ್ಲ- ಬಿಜೆಪಿ ಪರ ಜಿಟಿ ದೇವೇಗೌಡ ಬ್ಯಾಟಿಂಗ್