ಚುನಾವಣೆ ಇನ್ನೇನು ಮೂರಾನಾಲ್ಕು ತಿಂಗಳು ಬಾಕಿಯಿದೆ ಎಲ್ಲಾ ರಾಜಕೀಯ ಪಕ್ಷಗಳ ಭರಾಟೆ ಹೆಚ್ಚಾಗ್ತಿದೆ ಕೇಂದ್ರ ನಾಯಕರನ್ನ ಕರೆಸಿ ಸಮಾವೇಶಗಳ ಮೇಲೆ ಸಮಾವೇಶ ಮಾಡ್ತಾಯಿ ಇದೇ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ಕೆಂದ್ರದ ನಾಯಕಿಯನ್ನ ರಾಜ್ಯಕ್ಕೆ ಕರೆಸಲು ಕಸರತ್ತು ನಡೆಸಿದೆ.
ವಿಧಾನ ಸಭೆ ಚುನಾವಣೆ ಗೆ ಎಲ್ಲಿಲ್ಲದ ಕಸರತ್ತನ್ನ ಕಾಂಗ್ರೆಸ್ ಮಾಡುತ್ತಿದೆ. ಅದೇ ನಿಟ್ಟಿನಲ್ಲಿ ಬಿಜೆಪಿ ಕೂಡಾ ದೊಡ್ಡ ಮಟ್ಟದಲ್ಲಿಯೇ ರಣತಂತ್ರ ರೂಪಿಸುತ್ತಿದೆ.ಕೇಂದ್ರದಿಂದ ನಾಯಕರನ್ನು ಸಮಾವೇಶಗಳ ಮೇಲೆ ಸಮಾವೇಶ ಆಯೋಜನೆ ಮಾಡಿ ರಾಜ್ಯಕ್ಕೆ ಕರೆಸುತ್ತಿದೆ. ಇದರಿಂದ ಕಾಂಗ್ರೆಸ್ ಡಿಸ್ಟಪ್ ಆಗಿದೆ.ಈ ಹಿನ್ನಲೆ ಪ್ರಿಯಾಂಕಾ ಗಾಂಧಿಯನ್ನ ರಾಜ್ಯಕ್ಕೆ ಕರೆತರಲು ಡಿಕೆಶಿವಕುಮಾರ್ ಕಸರತ್ತು ನಡೆಸುತ್ತಿದ್ದಾರೆ.
ಹೌದು ಪ್ರಿಯಾಂಕಾ ಗಾಂಧಿ ಅವರನ್ನ ರಾಜ್ಯಕ್ಕೆ ಕರೆಸಿ ಚುನಾವಣೆ ರಣತಂತ್ರ ರೂಪಿಸಲು ಜನವರಿಯಲಗಲಿಯೇ ಮುನ್ನುಡಿ ಬರೆಯಬೇಕು ಎನ್ನುವುದು ರಾಜ್ಯ ಕೈ ನಾಯಕರ ಒತ್ತಾಸೆ ಆಗಿದೆ. ಈ ಹಿನ್ನಲೆ ಜನವರಿ ೬ ರಂದು ಮಹಿಳಾ ಘಟಕದಿಂದ ರಾಜ್ಯಮಟ್ಟದ ನಾ ನಾಯಕಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಇದಕ್ಕೆ ಇಗಾಗಲೇ ನಗರದ ಅರಮನೆ ಮೈದಾನದಲ್ಲಿ ಸಿದ್ದತೆಗಳು ನಡಿತಾಯಿದಾವೆ. ಇನ್ನೂ ಜನವರಿ ೯ ರಂದು ಕೆಪಿಸಿಸಿ ನೂತನ ಕಟ್ಟಡ ಉದ್ಘಾಟನೆ ಕಾರ್ಯಮವು ಇದೆ ಈ ಎರಡು ಕಾರ್ಯಕ್ರಮಕ್ಕೆ ಪ್ರಿಯಾಂಕಾ ಗಾಂಧಿ ಅವರನ್ನ ಕರೆಸಿ ಮಹಿಳಾ ಮತದಾರರನ್ನ ಸೆಳೆಯುವ ತಂತ್ರ ಕಾಂಗ್ರೆಸ್ ರೂಪಿಸಿದೆ ಈ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಬರ್ತಾರೆ. ಕರೆಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ ನಮ್ಮ ಪಕ್ಷದಲ್ಲಿ ಮಹಿಳೆಯರಿಗೆ ಮಹತ್ವ ಕೊಡುತ್ತೇವೆ ಈ ಹಿನ್ನಲೆ ನಾ ನಾಯಕಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ಹೇಳಿದ್ರು.