KSRTC ಬಸ್ಗಳಲ್ಲಿ ಲಗೇಜು ಸಾಗಾಣೆಯ ನಿಯಮಗಳನ್ನು ಮಾರ್ಪಾಡು ಮಾಡಲು ತೀರ್ಮಾನಿಸಿದ್ದು, ಅದರಂತೆ ನಾಯಿಯನ್ನು ಕೊಂಡೊಯ್ಯಲು ಒಬ್ಬ ವಯಸ್ಕ ಪ್ರಯಾಣಿಕರಂತೆ ಪರಿಗಣಿಸಿ ವಿಧಿಸಲಾಗುತ್ತಿದ್ದ ದರದಲ್ಲಿ ಬದಲಾವಣೆ ಮಾಡಲಾಗಿದೆ. ಇನ್ನುಮುಂದೆ ನಾಯಿ ಮತ್ತು ನಾಯಿಯ ಮರಿಗೆ ಅರ್ಧ ಟಿಕೆಟ್ ದರವನ್ನು ವಿಧಿಸುವಂತೆ ತಿಳಿಸಲಾಗಿದೆ. ಪ್ರಯಾಣಿಕರು ನಾಯಿಯ ಮೇಲೆ ವಿಧಿಸುವ ಟಿಕೆಟ್ ದರವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯ ಮಾಡ್ತಿದ್ರು, ಈ ಒತ್ತಡಕ್ಕೆ ಮಣಿದ ಸಾರಿಗೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಸಾಮಾನ್ಯ ವೇಗದೂತ, ನಗರ ಹೊರವಲಯ ಬಸ್ಗಳಲ್ಲಿ ನಾಯಿ ಸಾಗಾಣಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಹಾಗೆಯೇ ಬಸ್ನಲ್ಲಿ ಯದ್ವಾತದ್ವಾ ಲಗೇಜ್ ಸಾಗಾಣಿಕೆಗೆ ಬ್ರೇಕ್ ಹಾಕಲಾಗಿದೆ. ಪ್ರತಿ ಪ್ರಯಾಣಿಕರ 30Kg ಲಗೇಜ್ ಕೊಂಡೊಯ್ಯಲು ಅವಕಾಶವಿದ್ದು, 30 ಕೆಜಿಗಿಂತ ಹೆಚ್ಚು ಸಾಗಾಣಿಕೆಗೆ ನಿಯಮದಂತೆ ಹೆಚ್ಚುವರಿ ದರ ವಿಧಿಸಲು KSRTC ಹೊಸ ಆದೇಶ ಮಾಡಿದೆ.