Publish Date: Tue, 09 Jul 2019 (17:41 IST)
Updated Date: Tue, 09 Jul 2019 (17:42 IST)
ಈಗಿನ ರಾಜಕೀಯ ಕಡುವೈರಿಗಳೆಂದೇ ಗುರ್ತಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಹಾಗೂ ಹೆಚ್.ವಿಶ್ವನಾಥ್ ನಡುವೆ ಶೀತಲ ಸಮರ ಮುಂದುವರಿದಿದೆ.
ಜೆಡಿಎಸ್ ನ ಮಾಜಿ ರಾಜ್ಯಾಧ್ಯಕ್ಷರಾಗಿರುವ ಹೆಚ್.ವಿಶ್ವನಾಥ್ ಅವರು ಮಾಜಿ ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ್ದಾರೆ. ಸಚಿವ ಸ್ಥಾನದ ಆಫರ್ ನೀಡೀರೋದಕ್ಕೆ ಥ್ಯಾಂಕ್ಸ್ ಅಂತ ಮುಂಬೈನಲ್ಲಿ ಮಾಧ್ಯಮದವರೊಂದಿಗೆ ಹೇಳಿದ್ದಾರೆ.
ಸಚಿವ ಸ್ಥಾನ ಅಥವಾ ಇನ್ಯಾವುದೇ ಆಮಿಷಕ್ಕೆ ತಾವು ಒಳಗಾಗೋದಿಲ್ಲ. ಸರಕಾರ ಉತ್ತಮ ರೀತಿಯಿಂದ ನಡೆಸಿಕೊಂಡಿಲ್ಲ.
ಮೈತ್ರಿ ಸರಕಾರದಿಂದ ಅಭಿವೃದ್ಧಿ ಕಾರ್ಯಗಳೂ ಹೇಳಿಕೊಳ್ಳುವಂತೆ ಆಗಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದಾಗಿ ವಿಶ್ವನಾಥ್ ಹೇಳಿದ್ದಾರೆ.