ಬೆಂಗಳೂರು: ಮುಸ್ಲಿಮರು ನಮಾಜ್ ಮಾಡಿದ್ದನ್ನು ಸಮರ್ಥಿಸಲು ಹೋಗಿ ಹಿಂದೂಗಳು ಹಬ್ಬದ ದಿನದಂದು ಬಾರ್ ನಲ್ಲಿರುತ್ತಾರೆ ಎಂದು ಕೈ ನಾಯಕ ಆಂಜನೇಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಮುಸ್ಲಿಮರು ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಸಾರ್ವಜನಿಕರು ಮತ್ತು ಬಿಜೆಪಿ ತೀವ್ರ ಟೀಕೆ ನಡೆಸಿತ್ತು.
ಇದಕ್ಕೆ ಪ್ರತಿಕ್ರಿಯಿಸುವಾಗ ಮಾಜಿ ಸಚಿವ ಎಚ್ ಆಂಜನೇಯ ನಾಲಿಗೆ ಹರಿಬಿಟ್ಟಿದ್ದಾರೆ. ಮುಸ್ಲಿಮರು ಮಾಡಿದ್ದು ಪ್ರಾರ್ಥನೆ. ಕೋಲು ಹಿಡಿದುಕೊಂಡು ಹೋಗೋದಲ್ಲ.ಅವರಲ್ಲಿರೋ ಶ್ರದ್ಧೆಯನ್ನು ನೋಡಿ ಕಲಿತುಕೊಳ್ಳಿ. ಇವರಂಗೆ ನಾಮ ಹಾಕಿಕೊಂಡು ಪೂಜೆ ಮಾಡಿ ತಟ್ಟೆಗೆ ಹಾಕಯ್ಯ ಎಂದಿಲ್ಲ. ಅವರು ಮೂರ್ಖರಲ್ಲ. ಮಸೀದಿ ಇಲ್ಲ ಅಂತೇಳಿ ಇಲ್ಲಿ ನಮಾಜ್ ಮಾಡಿರಬಹುದು. ಅದರಲ್ಲೂ ನಾವು ಸಣ್ಣತನ ತೋರಿಸಿದ್ರೆ ಹೇಗೆ? ಗಣೇಶನ ಹಬ್ಬದ ಸಂದರ್ಭದಲ್ಲಿ ಬ್ರ್ಯಾಂಡಿ ಅಂಗಡಿಗಳಲ್ಲಿ ಫುಲ್ ರಶ್ ಇರುತ್ತದೆ. ಹಬ್ಬದ ಸಂದರ್ಭದಲ್ಲಿ ಹೂ, ಹಣ್ಣಿಗಿಂತ ಬಾರ್, ರೆಸ್ಟೋರೆಂಟ್ ಫುಲ್ ರಶ್ ಆಗಿರುತ್ತದೆ ಎಂದು ಆಂಜನೇಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.