ರಾಜಕೀಯ ನೋವು ಸಾಕಾಗಿದೆ ಎಂದ ದೇವೇಗೌಡ

ಭಾನುವಾರ, 4 ಆಗಸ್ಟ್ 2019 (18:21 IST)
ರಾಜಕೀಯದಲ್ಲಿ ಸಾಕಷ್ಟು ನೋವು ಕಂಡಿದ್ದೇನೆ. ರಾಜಕಾರಣ ಸಾಕಾಗಿದೆ ಹೀಗಂತ ಮಾಜಿ ಸಚಿವರೊಬ್ಬರು ಹೇಳಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರು ನನಗೆ ಗೆಲವು ತಂದು ಕೊಟ್ಟಿದ್ದಾರೆ. 50 ವರ್ಷಗಳಿಂದ ರಾಜಕೀಯ ಮಾಡಿರುವೆ. ಆದರೆ ಈಗ ಸಾಕಾಗಿದೆ. ಹೀಗಂತ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಪ್ರಸ್ತುತ ರಾಜಕೀಯ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದ ಅವರು, ಮಂತ್ರಿಯಾಗಿದ್ದಾಗ ಏನಾಯ್ತು? ಮೈತ್ರಿ ಸರಕಾರ ಏನಾಯ್ತು? ಅಭಿವೃದ್ಧಿ ಏನಾಯ್ತು? ಅಂತೆಲ್ಲ ಜನರಿಗೆ ಗೊತ್ತಿದೆ ಎಂದು ಭಾವುಕರಾದ್ರು.

ಇನ್ಮುಂದೆ ರಾಜಕೀಯ  ಮತ್ತು ಚುನಾವಣೆ ಸಾಕಾಗಿದೆ. ಹೀಗಂತ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದು ರಾಜಕೀಯ ಚರ್ಚೆಗೆ ಕಾರಣರಾಗಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಕ್ಕಳಿಗಾಗಿ ಚಾಂಪ್ – ಏನಿದರ ವೈಶಿಷ್ಟ್ಯ