Publish Date: Sun, 04 Aug 2019 (11:33 IST)
Updated Date: Sun, 04 Aug 2019 (11:35 IST)
ಫ್ಲೋರಿಡಾ: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯವನ್ನು ಗೆದ್ದರೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಿಚ್ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಟಿ20 ಪಂದ್ಯದ ಗೆಲುವಿನ ಬಳಿಕ ಮಾತನಾಡಿರುವ ಕೊಹ್ಲಿ ಗೆದ್ದಿದ್ದು ಖುಷಿಯೇ. ಆದರೆ ಪಿಚ್ ಬಗ್ಗೆ ತೃಪ್ತಿಯಿಲ್ಲ ಎಂದಿದ್ದಾರೆ.
‘ನಿಜ ಹೇಳಬೇಕೆಂದರೆ ಪಿಚ್ ಚೆನ್ನಾಗಿರಲಿಲ್ಲ. ಎರಡು ಮೂರು ದಿನಗಳಿಂದ ಮಳೆಯಿದ್ದುದರಿಂದ ಬಹುಶಃ ಸಿಬ್ಬಂದಿಯೂ ಏನೂ ಮಾಡುವಂತಿರಲಿಲ್ಲ. ಅವರಿಗೆ ಸಾಧ್ಯವಿರುವಷ್ಟು ಚೆನ್ನಾಗಿ ಮಾಡಿದ್ದಾರೆ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.