Select Your Language

Notifications

webdunia
webdunia
webdunia
webdunia

ಬಿಜೆಪಿ ಸೇರುತ್ತಾರಾ ಜಿ.ಟಿ.ದೇವೇಗೌಡರು..?

ಬಿಜೆಪಿ ಸೇರುತ್ತಾರಾ ಜಿ.ಟಿ.ದೇವೇಗೌಡರು..?
ಮೈಸೂರು , ಸೋಮವಾರ, 15 ಜುಲೈ 2019 (12:39 IST)
ಮೈಸೂರು :ಮೈತ್ರಿ ಸರ್ಕಾರದ ಸಚಿವ ಜಿ.ಟಿ.ದೇವೇಗೌಡರು ಬಿಜೆಪಿ ಸೇರಲಿದ್ದಾರೆ ಎಂಬ ಪೋಸ್ಟ್ ವೊಂದು ಇದೀಗ ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ.




ಬಿಜೆಪಿ ಕಾರ್ಯಕರ್ತರು ಫೇಸ್ ಬುಕ್ ನಲ್ಲಿ, ಬಿಜೆಪಿ ಸೇರುತ್ತಿರೋ ಜಿ.ಟಿ.ದೇವೇಗೌಡರಿಗೆ ಸ್ವಾಗತ. ಪ್ರಧಾನಿ ಮೋದಿ ಅವರ ಕಾರ್ಯವೈಖರ್ಯವನ್ನು ಮೆಚ್ಚಿ ಜಿ.ಟಿ.ಡಿ. ಬಿಜೆಪಿಗೆ. ಅಪ್ಪ-ಮಕ್ಕಳ ಪಕ್ಷ ತೊರೆದು ಬಿಜೆಪಿಗೆ ಬರ್ತಿರೋ ಜಿಟಿಡಿಗೆ ಸ್ವಾಗತ. ನಿಮ್ಮ ಪುತ್ರನಿಗೆ ಟಿಕೆಟ್ ಕೊಡದ ಜೆಡಿಎಸ್ ಇದ್ದೂ ಸತ್ತಂತೆ’ ಎಂಬ ಪೋಸ್ಟ್ ನ್ನು ಹರಿಬಿಟ್ಟಿದ್ದಾರೆ.


ಈಗಾಗಲೇ ಮೈತ್ರಿ ಶಾಸಕರು ಸರ್ಕಾರದಿಂದ ಬೇಸತ್ತು ಬಿಜೆಪಿಯ ಕಡೆಗೆ ಮುಖಮಾಡಿದ್ದಾರೆ. ಈ ನಡುವೆ ಇತ್ತೀಚೆಗೆ ಪ್ರಧಾನಿ ಮೋದಿ ಅವರ ಕಾರ್ಯವೈಖರ್ಯವನ್ನು ಹಾಡಿ ಹೊಗಳುತ್ತಿದ್ದ ಸಚಿವ ಜಿ.ಟಿ.ದೇವೇಗೌಡರು ಕೂಡ ಬಿಜೆಪಿ ಸೇರುತ್ತಾರಾ ಎಂಬ ಅನುಮಾನ ವ್ಯಕ್ತವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಸುತ್ತಿದ್ದವಳನ್ನೇ ಕೊಲೆ ಮಾಡಿದ ಪ್ರಿಯಕರ: ಕಾರಣ?