Select Your Language

Notifications

webdunia
webdunia
webdunia
webdunia

ಗೃಹಲಕ್ಷ್ಮಿ ಹಣ ಕರೆಕ್ಟ್ ಆಗಿ ಖಾತೆಗೆ ಬರಬೇಕೆಂದರೆ ಈ ಎರಡು ನಿಯಮ ಪಾಲಿಸಬೇಕು

Gruhalakshmi scheme
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ಖಾತೆಗೆ ಬರಬೇಕೆಂದರೆ ಈ ಎರಡು ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲೇಬೇಕು.
 

ಪ್ರತೀ ತಿಂಗಳು ಮನೆಯ ಯಜಮಾನಿಯ ಖಾತೆಗೆ 2,000 ರೂ. ಹಣ ನೀಡುವುದೇ ಗೃಹಲಕ್ಷ್ಮಿ ಯೋಜನೆಯಾಗಿದೆ. ಈ ಯೋಜನೆ ದುರುಪಯೋಗವಾಗುತ್ತಿದೆ ಎಂಬ ಕಾರಣಕ್ಕೆ ಈಗ ಸರ್ಕಾರ ಪರಿಷ್ಕರಣೆ ಮಾಡುತ್ತಿದ್ದು ಕಟ್ಟು ನಿಟ್ಟಿನ ನಿಯಮಗಳನ್ನು ಹಾಕಿದೆ.

ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬರಬೇಕೆಂದರೆ ಈ ಎರಡು ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ ನೀಡಿದ್ದಾರೆ. ಗೃಹಲಕ್ಷ್ಮಿ ಹಣ ಬರಬೇಕೆಂದರೆ ನಿಮ್ಮ ಫೋನ್ ನಂಬರ್ ಮತ್ತು ಬ್ಯಾಂಕ್ ಖಾತೆ ಸರಿಯಾಗಿರಬೇಕು.

ಗೃಹಲಕ್ಷ್ಮಿ ಯೋಜನೆ ಯಾರು ಪಡೆಯುತ್ತಾರೋ ಅವರ ಮೊಬೈಲ್ ಸಂಖ್ಯೆ ಒದಗಿಸಬೇಕಾಗುತ್ತದೆ. ಆ ಮೊಬೈಲ್ ಸಂಖ್ಯೆಗೆ ಹಣ ಸಂದಾಯವಾದ ಸಂದೇಶ ಬರುತ್ತದೆ. ಆದರೆ ಎಷ್ಟೋ ಮಂದಿ ತಮ್ಮ ಮನೆಯವರು, ಮಕ್ಕಳ ಫೋನ್ ನಂಬರ್ ಕೊಟ್ಟಿರುತ್ತಾರೆ. ಆದರೆ ಇನ್ನು ಮುಂದೆ ಹೀಗಾಗಲ್ಲ. ಫಲಾನುಭವಿ ಮಹಿಳೆಯ ಮೊಬೈಲ್ ನಂಬರ್ ನ್ನೇ ನೀಡಬೇಕು.

ಎರಡನೆಯದಾಗಿ, ಬ್ಯಾಂಕ್ ಖಾತೆ ಕೂಡಾ ಫಲಾನುಭವಿಗಳದ್ದೇ ಆಗಿರಬೇಕು. ಫಲಾನುಭವಿಗಳು ತಮ್ಮ ಮಕ್ಕಳ ಅಥವಾ ಗಂಡನ ಇಲ್ಲವೇ ಇನ್ನಿತರ ಸದಸ್ಯರ ಹೆಸರಿನಲ್ಲಿರುವ ಖಾತೆ ನೀಡಿದರೆ ಇನ್ನು ಹಣ ಸಂದಾಯವಾಗಲ್ಲ. ಫಲಾನುಭವಿಗಳೇ ತಮ್ಮ ಹೆಸರಿನಲ್ಲಿರುವ ಖಾತೆಯನ್ನೇ ನೀಡಬೇಕು ಎಂದು ಸಿಎಂ ಖಡಕ್ ಸೂಚನೆ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Karnataka weather: ವಾರವಿಡೀ ರಾಜ್ಯದಲ್ಲಿ ಮಳೆಯಿರುತ್ತಾ, ಇಲ್ಲಿದೆ ಹವಾಮಾನ ವರದಿ