Publish Date: Tue, 30 Jun 2020 (18:25 IST)
Updated Date: Tue, 30 Jun 2020 (18:26 IST)
ಮದುವೆ ಶಾಸ್ತ್ರಗಳು ಸಂಪೂರ್ಣವಾಗಿ ಮುಗಿಯುವ ಮೊದಲೇ ವರನೊಬ್ಬ ತಾಳಿ ಕಟ್ಟಿದ ನಂತರ ಕೊರೊನಾಗೆ ಬಲಿಯಾಗಿದ್ದಾನೆ.
ವೃತ್ತಿಯಲ್ಲಿ ಟೆಕ್ಕಿಯಾಗಿದ್ದ 29 ವರ್ಷದ ವರ ಡೆಡ್ಲಿ ಕೊರೊನಾಕ್ಕೆ ಸಾವನ್ನಪ್ಪಿದ್ದಾನೆ.
ಬಿಹಾರದ ಹಳ್ಳಿಯೊಂದರಲ್ಲಿ ಘಟನೆ ನಡೆದಿದ್ದು, ಮದುವೆಯಾದ ಮರುದಿನ ಅಸ್ವಸ್ಥಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ದಾರಿಯಲ್ಲಿಯೇ ಆತ ಸಾವನ್ನಪ್ಪಿದ್ದನು.
ಮದುವೆಯಲ್ಲಿ ಪಾಲ್ಗೊಂಡ ಬಹುತೇಕರಿಗೆ ಕೊರೊನಾ ಪಾಸಿಟಿವ್ ಬಂದಿದೆ.