Publish Date: Mon, 29 Jun 2020 (08:58 IST)
Updated Date: Mon, 29 Jun 2020 (09:00 IST)
ಬೆಂಗಳೂರು: ನಿಮ್ಮ ವೈವಾಹಿಕ ಬದುಕು ಸುದೀರ್ಘ ಅವಧಿಯವರೆಗೆ ಅಡೆತಡೆಯಿಲ್ಲದೇ ಸಾಗುತ್ತದೆ ಎಂದು ತಿಳಿಯುವುದು ಹೇಗೆ ಗೊತ್ತಾ? ದಾಂಪತ್ಯ ಜೀವನ ಎಂದರೆ ಕಷ್ಟ-ಸುಖ ಗ್ಯಾರಂಟಿ. ಆದರೂ ಜತೆಯಾಗಿ ನೂರು ಕಾಲ ಸುಖವಾಗಿ ಬದುಕುವುದರ ಲಕ್ಷಣ ಇಲ್ಲಿದೆ ನೋಡಿ.
ಜಗಳವಾಡಿದರೂ ಕೇರ್ ಮಾಡುವುದು
ಗಂಡ-ಹೆಂಡತಿ ಎಂದರೆ ವೈಮನಸ್ಯಗಳು ಬಂದೇ ಬರುತ್ತವೆ. ಆದರೆ ಅದು ಎಲ್ಲೆ ಮೀರಿ ಹೋಗಬಾರದಷ್ಟೇ. ಎಷ್ಟೇ ಜಗಳವಾಡಿದರೂ ನೀವು ಒಬ್ಬರಿಗೊಬ್ಬರು ಕೇರ್ ಮಾಡ್ತೀರಿ ಎಂದರೆ ನಿಮ್ಮ ಸಂಬಂಧ ಗಟ್ಟಿಯಾಗಿರಲಿದೆ ಎಂದೇ ಅರ್ಥ.
ಹಂಚಿಕೊಳ್ಳುವುದು
ಮನೆಗೆಲಸವಿರಲಿ, ಹಣಕಾಸಿನ ವಿಚಾರವಿರಲಿ, ಭಾವನೆಗಳ ವಿನಿಮಯವಿರಲಿ ಒಬ್ಬರಿಗೊಬ್ಬರು ಹಂಚಿಕೊಳ್ಳುವ ಗುಣವಿರಬೇಕು. ಹಾಗೆಯೇ ಪರಸ್ಪರರ ಅಭಿಪ್ರಾಯಕ್ಕೆ ಗೌರವವಿರಬೇಕು. ತಾನು ಮೇಲು ಎನ್ನುವ ಭಾವನೆ ಇದ್ದರೆ ಯಶಸ್ವಿಯಾಗದು.
ಆದ್ಯತೆಗಳು
ಜಗತ್ತಿನಲ್ಲಿ ನಿಮಗೆ ಯಾರೇ ಪ್ರೀತಿಪಾತ್ರರು ಇರಲಿ, ನಿಮ್ಮ ಮೊದಲ ಆಯ್ಕೆ ನಿಮ್ಮ ಸಂಗಾತಿ ಎಂದಾದರೆ ಚಿಂತೆ ಬೇಡ. ನಿಮ್ಮ ಸಂಬಂಧ ಗಟ್ಟಿಯಾಗಿರುತ್ತದೆ.
ಸಮಯ ಕಳೆಯುವುದು
ಸಮಯ ಸಿಕ್ಕಾಗಲೆಲ್ಲಾ ಸಂಗಾತಿ ಜತೆಗೆ ಕಳೆಯಬೇಕು ಎನಿಸಬೇಕು. ಬದಲಾಗಿ ಅವಳಿಂದ/ಆತನಿಂದ ಕಳಚಿಕೊಂಡರೆ ಸಾಕು. ಸ್ವಲ್ಪ ಸಮಯ ಒಬ್ಬನೇ ಇರಲು ಸಮಯ ಸಿಕ್ಕರೆ ಸಾಕು ಎನಿಸಿದರೆ ಆ ಸಂಬಂಧ ಚೆನ್ನಾಗಿಲ್ಲವೆಂದೇ ಅರ್ಥ.