Select Your Language

Notifications

webdunia
webdunia
webdunia
webdunia

ಮದುಮಗನಿಗೆ ಕೊರೊನಾ ಸೋಂಕು ಹಿನ್ನಲೆ; ಇಂದು ನಡೆಯಬೇಕಿದ್ದ ಮದುವೆ ರದ್ದು

ಮದುಮಗನಿಗೆ ಕೊರೊನಾ ಸೋಂಕು ಹಿನ್ನಲೆ; ಇಂದು ನಡೆಯಬೇಕಿದ್ದ ಮದುವೆ ರದ್ದು
ವಿಜಯಪುರ , ಮಂಗಳವಾರ, 30 ಜೂನ್ 2020 (10:30 IST)
ವಿಜಯಪುರ : ಮದುಮಗನಿಗೆ ಕೊರೊನಾ ಸೋಂಕು ತಗುಲಿದ್ದ ಹಿನ್ನಲೆಯಲ್ಲಿ ಇಂದು ನಡೆಯಬೇಕಿದ್ದ ಮದುವೆ ಕಾರ್ಯವನ್ನು ಮುಂದೂಡಲಾಗಿದೆ.

26 ವರ್ಷದ ಮದುಮಗ ಪೊಲೀಸ್ ಪೇದೆಯಾಗಿ ಬೆಂಗಳೂರಿನ ಕಮಿಷನರೇಟ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮದುವೆ ಹಿನ್ನಲೆಯಲ್ಲಿ ವಿಜಯಪುರಕ್ಕೆ ಬಂದಿದ್ದರು. ಆಗ ಅವರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಿದಾಗ  ಪಾಸಿಟಿವ್ ಬಂದಿದೆ.
ಈ ಹಿನ್ನಲೆಯಲ್ಲಿ ಇಂದು ನಡೆಯಬೇಕಿದ್ದ ಮದುವೆ ರದ್ದು ಮಾಡಿ, ಮದುಮಗನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೇ ಆತನ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಗೆ ಕಳುಹಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಟಿಕ್ ಟಾಕ್ ಬ್ಯಾನ್; ಈ ಬಗ್ಗೆ ಟಿಕ್ ಟಾಕ್ ಸಂಸ್ಥೆ ಪ್ರತಿಕ್ರಿಯೆ ಏನು?