Select Your Language

Notifications

webdunia
webdunia
webdunia
webdunia

ಶಾಕಿಂಗ್ ನ್ಯೂಸ್; ವಿಶ್ವದಾದ್ಯಂತ 1 ಕೋಟಿಗೂ ಹೆಚ್ಚು ಜನರಿಗೆ ಕೊರೊನಾ ಸೋಂಕು

ಶಾಕಿಂಗ್ ನ್ಯೂಸ್; ವಿಶ್ವದಾದ್ಯಂತ 1 ಕೋಟಿಗೂ ಹೆಚ್ಚು ಜನರಿಗೆ ಕೊರೊನಾ ಸೋಂಕು
ನವದೆಹಲಿ , ಮಂಗಳವಾರ, 30 ಜೂನ್ 2020 (09:38 IST)
ನವದೆಹಲಿ : ಇಡೀ ಜಗತ್ತಿಗೆ ಶಾಕಿಂಗ್ ನ್ಯೂಸ್. ವಿಶ್ವದಾದ್ಯಂತ 1 ಕೋಟಿಗೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದೆ.

ಜಗತ್ತಿನಲ್ಲಿ ಇಲ್ಲಿಯವರೆಗೆ ಕೊರೊನಾಗೆ 5,04,498 ಜನರು  ಸಾವನಪ್ಪಿದ್ದಾರೆ. ಅಮೇರಿಕ, ಬೆಜಿಲ್, ಭಾರತದಲ್ಲಿ ಕೊರೊನಾ ಅಬ್ಬರ ಹೆಚ್ಚಾಗಿದೆ.  ಪ್ರತಿ 24 ಗಂಟೆಗೆ ಕೊರೊನಾಗೆ 4700 ಜನ ಬಲಿಯಾಗಿದ್ದಾರೆ. ಒಂದು ಗಂಟೆಗೆ 196 ಬಲಿ ಪಡೆಯುತ್ತಿದೆ ಕೊರೊನಾ. 18 ಸೆಕೆಂಡ್ ಗೆ ಒಬ್ಬರು ಕೊರೊನಾದಿಂದ ಸಾವನಪ್ಪುತ್ತಿದ್ದಾರೆ.

ಅಲ್ಲದೇ ಬಲಿಯಾಗುವ 4 ಜನರ ಪೈಕಿ ಒಬ್ಬರು ಅಮೇರಿಕದವರು ಎನ್ನಲಾಗಿದೆ. ಏಡ್ಸ್ ಗೆ ಪ್ರತಿ ತಿಂಗಳು 64 ಸಾವಿರ ಜನ ಬಲಿಯಾಗುತ್ತಿದ್ದರು. ಆದರೆ ಪ್ರತಿ ತಿಂಗಳಿಗೆ 78,000 ಜನ ಕೊರೊನಾದಿಂದ ಸಾವನಪ್ಪುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಚೀನಾ ಸಂಘರ್ಷದ ನಡುವೆ ವಾಯುಸೇನೆಗೆ ರಾಫೆಲ್ ಯುದ್ಧವಿಮಾನಗಳ ಆಗಮನ