Select Your Language

Notifications

webdunia
webdunia
webdunia
webdunia

9 ತಿಂಗಳ ಮಗುವಿಗೆ ಎಲೆ ಅಡಿಗೆ ನೀಡಿ ಕೊಲೆ ಮಾಡಿದ ಅಜ್ಜಿ

9 ತಿಂಗಳ ಮಗುವಿಗೆ ಎಲೆ ಅಡಿಗೆ ನೀಡಿ ಕೊಲೆ ಮಾಡಿದ ಅಜ್ಜಿ
ಗದಗ , ಶನಿವಾರ, 25 ನವೆಂಬರ್ 2023 (10:10 IST)
WD
ಗದಗ: 9 ತಿಂಗಳ ಹಸುಗೂಸಿಗೆ ಎಲೆ ಅಡಿಕೆ ತಿನಿಸಿ ಅಜ್ಜಿಯೇ ಕೊಲೆ ಮಾಡಿದ ಘಟನೆ ಗದಗದಲ್ಲಿ ನಡೆದಿದೆ. ಇದರ ಕಾರಣ ಕೇಳಿದರೆ ಆಕ್ರೋಶವಾಗದೇ ಇರದು.

ಈ ಬಗ್ಗೆ ಅತ್ತೆ ಸರೋಜಾ ವಿರುದ್ಧ ಸೊಸೆ ನಾಗರತ್ನ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಅತ್ತೆ ಸರೋಜಾ ಮಗುವನ್ನು ಕೊಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಹೆರಿಗೆಯಾದ 5 ತಿಂಗಳಲ್ಲಿ ನಾಗರತ್ನ ಮಗುವಿನ ಜೊತೆ ಗಂಡನ ಮನೆಗೆ ಬಂದಿದ್ದಳು. ಆದರೆ ಈ ವೇಳೆ ಅತ್ತೆ ಸರೋಜಾ ಇಷ್ಟು ಬೇಗ ಮಗು ಯಾಕೆ ಮಾಡಿಕೊಂಡ್ರಿ ಎಂದು ತಗಾದೆ ತೆಗೆದಿದ್ದಾಳೆ. ಅಷ್ಟೇ ಅಲ್ಲ ಮಗುವಿಗೆ ಅಡಿಕೆ ಹೋಳು, ವೀಳ್ಯ ತಿನಿಸಿ ಸಾಯಿಸಿದ್ದಾಳೆ.

ನ.22 ರಂದೇ ಮಗುವಿನ ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಆದರೆ ಇದೀಗ ಪೊಲೀಸರು ಮತ್ತೆ ಶವ ಹೊರತೆಗೆಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿವಾಹೇತರ ಸಂಬಂಧ: ಬಾಯ್‌ಫ್ರೆಂಡ್‌ನ ಖಾಸಗಿ ಭಾಗ ಕತ್ತರಿಸಿ ಹಾಕಿದ ಮಹಿಳೆ