Publish Date: Wed, 16 Feb 2022 (07:48 IST)
Updated Date: Wed, 16 Feb 2022 (08:43 IST)
ಚಾಮರಾಜನಗರ : ನ್ಯಾಯಾಲಯದ ಸೂಚನೆಯ ನಂತರವೂ ಹಿಜಬ್ ಧರಿಸಿ ಬರುವುದು ತಪ್ಪಾಗುತ್ತದೆ.
ಯಾವುದೇ ಕಾರಣಕ್ಕೂ ಹಿಜಬ್ ಧರಿಸಿ ಬರಲು ಬಿಡಲ್ಲ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ತಿಳಿಸಿದರು. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಪದವಿ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಇಲ್ಲ.
ಆದರೆ ಹಿಜಬ್ ಧರಿಸಿ ಶಾಲೆಗೆ ಬರಲು ಕಾನೂನಿನಲ್ಲಿ ಅವಕಾಶವಿಲ್ಲ. ಕಾನೂನು ಗೌರವಿಸುವುದನ್ನು ವಿದ್ಯಾರ್ಥಿಗಳು ಕಲಿತುಕೊಳ್ಳಬೇಕು. ಹೈಕೋರ್ಟ್ ಸೂಚನೆಯ ನಡುವೆಯೂ ಹಿಜಬ್ ಧರಿಸಿ ಬರುವುದು ಸರಿಯಲ್ಲ ಎಂದು ಹೇಳಿದರು.
ಕಾನೂನು ಉಲ್ಲಂಘಿಸುವವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಶಾಲಾ-ಕಾಲೇಜುಗಳಿಗೆ ಹೊರಗಿನ ಶಕ್ತಿಗಳು ಪ್ರವೇಶ ಮಾಡಬಾರದು. ಹೊರಗಿನವರು ಬಾರದಂತೆ ನೋಡಿಕೊಳ್ಳುವುದು ಪ್ರಾಂಶುಪಾಲರು ಹಾಗೂ ಅಧ್ಯಾಪಕರ ಜವಾಬ್ದಾರಿ. ಯಾರೂ ಯಾರನ್ನು ಟೀಕೆ, ಆರೋಪ ಮಾಡಿ ಗೊಂದಲ ನಿರ್ಮಾಣ ಮಾಡುವುದು ಬೇಡ. ನಾಳೆಯಿಂದ ಪದವಿ ಕಾಲೇಜುಗಳು ಪುನರಾರಂಭವಾಗಲಿವೆ ಎಂದರು.