Select Your Language

Notifications

webdunia
webdunia
webdunia
webdunia

ಧರ್ಮ ಮುಖ್ಯ ಎಂದು ಶಾಲೆಯನ್ನೇ ತೊರೆದ ವಿದ್ಯಾರ್ಥಿನಿಯರು!

ಧರ್ಮ ಮುಖ್ಯ ಎಂದು ಶಾಲೆಯನ್ನೇ ತೊರೆದ ವಿದ್ಯಾರ್ಥಿನಿಯರು!
ಕಲಬುರಗಿ , ಮಂಗಳವಾರ, 15 ಫೆಬ್ರವರಿ 2022 (08:26 IST)
ಕಲಬುರಗಿ : ಹಿಜಬ್‌ ಧರಿಸಲು ಅವಕಾಶ ನೀಡದ ಕಾರಣ ಹೈಸ್ಕೂಲ್ ವಿದ್ಯಾರ್ಥಿನಿಯರು ಉರ್ದು ಶಾಲೆಗೆ ಗೈರಾಗಿದ್ದಾರೆ.

ಕಲಬುರಗಿ ನಗರದ ಜಗತ್ ಬಳಿಯಿರುವ ಉರ್ದು ಶಾಲೆಯ 8, 9, 10ನೇ ತರಗತಿಯಲ್ಲಿ ಓದುತ್ತಿದ್ದ 80ಕ್ಕೂ ಅಧಿಕ ವಿದ್ಯಾರ್ಥಿಗಳು ಇಂದು ತರಗತಿಗೆ ಹಾಜರಾಗಿಲ್ಲ. ಉರ್ದು ಶಾಲೆಯ ತರಗತಿಗಳು ಖಾಲಿಯಾಗಿದ್ದು ಶಿಕ್ಷಕರು ಮಾತ್ರ ಎಂದಿನಂತೆ ಶಾಲೆಗೆ ಆಗಮಿಸಿದ್ದಾರೆ.

ಸೋಮವಾರ ಹೈಕೋರ್ಟ್ ಆದೇಶವನ್ನು ಧಿಕ್ಕರಸಿ ಜೇವರ್ಗಿಯ ಉರ್ದು ಶಾಲೆಯ ವಿದ್ಯಾರ್ಥಿನಿಯರು ಶಾಲೆಗೆ ಹಿಜಬ್ ಧರಿಸಿ ಆಗಮಿಸಿದ್ದರು.

ನಾವು ವಿದ್ಯಾರ್ಥಿನಿಯರಿಗೆ ಹೈಕೋರ್ಟ್‌ ಆದೇಶದ ಬಗ್ಗೆ ಮೊದಲೇ ತಿಳಿಸಿದ್ದೆವು. ನಮ್ಮಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಹಳ್ಳಿಯಿಂದ ಬರುತ್ತಾರೆ. ಅವರಿಗೆ ನಿಯಮಗಳ ಬಗ್ಗೆ ಹೆಚ್ಚಾಗಿ ತಿಳಿದಿರದ ಕಾರಣ ಹಿಜಬ್ ಧರಿಸಿಯೇ ಶಾಲೆಯ ಆವರಣ ಪ್ರವೇಶಿಸಿದ್ದರು ಎಂದು ತಿಳಿಸಿದರು. 


Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ವಿರುದ್ಧ ಕೇಸ್ ದಾಖಲು ಎಷ್ಟು ಕೇಸ್ ದಾಖಲು?