Select Your Language

Notifications

webdunia
webdunia
webdunia
webdunia

ಬೇರೆ ಊರಲ್ಲಿದ್ದವರಿಗೆ ಬಸ್ ವ್ಯವಸ್ಥೆ ಮಾಡೋದಿಲ್ಲ ಎಂದ ಸರಕಾರ

ಬೇರೆ ಊರಲ್ಲಿದ್ದವರಿಗೆ ಬಸ್ ವ್ಯವಸ್ಥೆ ಮಾಡೋದಿಲ್ಲ ಎಂದ ಸರಕಾರ
ಕಲಬುರಗಿ , ಶನಿವಾರ, 2 ಮೇ 2020 (16:24 IST)
ವಲಸೆ ಹೋಗಿರುವ ಕಾರ್ಮಿಕರಿಗೆ ಸರಕಾರದಿಂದ ಸಾರಿಗೆ ವ್ಯವಸ್ಥೆ ಮಾಡೋದಿಲ್ಲ ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ.

ಬೇರೆ ಬೇರೆ ರಾಜ್ಯಗಳಿಂದ ಕಲಬುರಗಿ ಜಿಲ್ಲೆಗೆ ಆಗಮಿಸುವ ವಲಸೆ ಕಾರ್ಮಿಕರು ತಮ್ಮ ಸ್ವಂತ ಖರ್ಚಿನಲ್ಲಿ ಬರಬೇಕು. ಹೀಗಂತ ಡಿಸಿಎಂ ಹಾಗೂ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಸರಕಾರದ ಮಾರ್ಗಸೂಚಿಯಂತೆ ವಲಸೆ ಹೋದವರು ರಾಜ್ಯಕ್ಕೆ, ಜಿಲ್ಲೆಗಳಿಗೆ ಬರಬಹುದು. ಆದರೆ ಅಲ್ಲಿಂದ ಬರುವ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡೋದಿಲ್ಲ. ಆದರೆ ಒಂದೇ ಸ್ಥಳಕ್ಕೆ ಬಹಳಷ್ಟು ಕಾರ್ಮಿಕರು ಬರುತ್ತಿದ್ದರೆ ಅಲ್ಲಿ ಬಸ್ ವ್ಯವಸ್ಥೆ ಕಲ್ಪಿಸಲು ಸರಕಾರ ನಿರ್ಧರಿಸಿದೆ. ಆದರೆ ಕಾರ್ಮಿಕರೇ ಟಿಕೆಟ್ ಕೊಂಡುಕೊಳ್ಳಬೇಕು ಎಂದಿದ್ದಾರೆ.

ಬೇರೆ ಜಿಲ್ಲೆ, ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ಮಾಡಬೇಕು ಎಂದು ಅಧಿಕಾರಿಗಳಿಗೆ ಡಿಸಿಎಂ ಸೂಚನೆ ಕೊಟ್ಟಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೂರು ಝೋನ್ ಗಳಲ್ಲಿ ಸಿಗುತ್ತೆ ಎಣ್ಣೆ : ಕುಡುಕರಿಗೆ ಗುಡ್ ನ್ಯೂಸ್